ಬರೆವ ಭಾವವು ಕವಿಗೆ
ಕೇಳ್ವ ಪುಣ್ಯವು ಕಿವಿಗೆ
ಗಾನಯೋಗಿಯ ಬಾಯೊ
ಳದೆ ನಾದವಯ್ಯಾ !
ಅವರವರಿಗವರವರ
ಪುಣ್ಯವಿರೆ ತಡವೇಕೆ
ಬೆಳಕ ಕಾಣೇಳಿನ್ನು
ಜಾಣಮೂರ್ಖ //
ಕವಿಗೆ ಬೇಕಾದದ್ದು ಕವಿ ಅಷ್ಟೆ ! ಬರೀ ಕಿವಿಯಲ್ಲ ! ಹೃದಯವಿರುವಂತಹಾ ಕಿವಿ. ಬರೆವ ಪುಣ್ಯ ಕವಿಯದಾದರೆ ಕೇಳುವ ಪುಣ್ಯ ಕಿವಿಯದ್ದು . ಇನ್ನು ಅದನ್ನು ಹಾಡಿ ನಲಿಯುವುದು , ಸಂಗೀತ ರಸಿಕರಿಗೆ ರಸದೌತಣವನಿಕ್ಕುವುದು ಹಾಡುಗಾರನ ಪುಣ್ಯ. ಅವನ ಪಾಲಿಗೆ ಈ ಜಗತ್ತೆಲ್ಲಾ ನಾದಮಯ ! ಭಗವಂತನು ಅವರವರಿಗವರವರ ಪುಣ್ಯವಿಟ್ಟಿದ್ದಾನೆ. ಮತ್ತೆ ತಡವೇಕೆ ? ನಿನಗಿಟ್ಟ ಪುಣ್ಯದ ಬೆಳಕ ಕಾಣುವ ಸಾಮರ್ಥ್ಯ , ಸುಂದರ ಹೃದಯ ನಿನ್ನೊಳಗೇ ಇದೆ. The kingdom of god within you ಆ ಬೆಳಕ ಕಾಣು ! ಕಂಡು ಜಗದೆಲ್ಲೆಡೆಯಲ್ಲೂ ಆ ಬೆಳಕ ಹರಡೇಳಯ್ಯಾ ಗೆಳೆಯಾ !
ಹಾ, ಇದೆಲ್ಲಕ್ಕೂ ಮುನ್ನ ಒಂದು ಮಾತು. ಬೆಳಕ ಕಾಣ್ವ ಮನಸ್ಸು ,ಹೃದಯ ಬೇಕಷ್ಟೆ. ಅದಕ್ಕೆ ಅಗತ್ಯವಾದ ಶಾಂತಿ ಸಮಾಧಾನಗಳನ್ನು ಕಂಡುಕೊಳ್ಳುವವನು , ಬಾಳಜಂಜಡಗಳನ್ನು ಗೆಲುವವನು ನೀನಾಗಬೇಕಯ್ಯಾ ಗೆಳೆಯ. ಆಗಲೇ ಬೆಳಕು ಕಾಣಲು ಸಾಧ್ಯ ! ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021