ಕಿವಿ ಕೊರಳು ತಲೆ ದೇಹ
ದಂಗವಂಗಕು ಬಿಡದೆ
ಬಂಗಾರದೊಡವೆಯೊಡೆ
ರೇಶಿಮೆಯ ಉಡುಗೆ !
ಝಗಮಗಿಸುತಿದೆ ನಗದು
ಜಗದ ಜನರೊಡೆ ಎದೆಯ
ನಗುವೆಲ್ಲಿ ಜಾರಿಹುದೊ!
ಜಾಣಮೂರ್ಖ ?//
ಜಗತ್ತನ್ನು ಹಾಗೇ ಸುಮ್ಮನೇ ವೀಕ್ಷಿಸಿ ಗೆಳೆಯರೇ ! ಜನರ ಕಿವಿ , ಕೊರಳು , ಬೆರಳು , ತಲೆ ದೇಹದ ಅಂಗ ಅಂಗಕ್ಕೂ ಬಂಗಾರದ ಒಡವೆಗಳು ! ರೇಶ್ಮೆಯ ಮತ್ತೆ ಇನ್ನೆಂತೆಂತದೋ ತರಾವರಿಯ ವಸ್ತ್ರಗಳು ! ಕೈತುಂಬಾ ಹಣ ! ವೈಭವದ ಜೀವನ. ಇವೆಲ್ಲಕ್ಕಿಂತ ಮಿಗಿಲಾದ ಹೃದಯ ತುಂಬಿದ ನಗು ಇವುಗಳ ನಡುವೆ ಮುಚ್ಚಿ ಹೋಗಿದೆ. ನಗು ಭಗವಂತ ನೀಡಿದ ಸುಂದರ ಆಭರಣ ! ಆ ನಗುವನ್ನೇ ಮನುಷ್ಯ ಮರೆತುಬಿಟ್ಟಿದ್ದಾನೆ. ಅದು ಕಾಣುತ್ತಲೇ ಇಲ್ಲ! ಕಂಡರೂ ಕೃತಕ ನಗು ! ಮನುಷ್ಯ ಹೃದಯದ ನಗುವನ್ನು ನಗುತ್ತಲೂ ಇಲ್ಲ ! ನಗಿಸುತ್ತಲೂ ಇಲ್ಲ ! ನಗುವಿರದ ನಗ, ನಗದು, ತೊಡುಗೆ ಬಂಗಾರಗಳು ನೆಮ್ಮದಿಯನ್ನು ಕೊಟ್ಟಾವೆ !? ಸ್ವಲ್ಪ ಚಿಂತಿಸಿ ಗೆಳೆಯರೇ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021