ಬೇಡಿ ಬಡತನ ಬಹುದು
ನೀಡಿ ಸಿರಿತನ ಬಹುದು
ಕೊಡುವಳೈ ಭೂತಾಯಿ
ಸಿರಿಯ ಗಣಿಯದಕೆ !
ಪಡೆದುದಂ ಬಿಟ್ಟು ತಾ
ನಡಿಗಡಿಗೆ ಬೇಡುವರು
ಮೂಢ ಬಡವರು ಕಾಣೊ
ಜಾಣಮೂರ್ಖ //
“Begging brings poverty” ಎಂಬ ಮಾತನ್ನು ನನ್ನ ತಾತ ಸದಾ ಹೇಳುತ್ತಿದ್ದರು. ಬೇಡುವಿಕೆ ಬಡತನವನ್ನು ತಂದೊಡ್ಡುತ್ತದೆ ಎಂದು. ಇದು ಸತ್ಯವೂ ಹೌದು. ಬೇಡಿದಷ್ಟೂ ನಾವು ಬಡವರೇ ! ನೀಡಿದಷ್ಟೂ ಸಿರಿವಂತರೇ ! ಬೇಡಿದರೆ ಯಾರನ್ನು ಬೇಡಬೇಕು ? ನೀಡಿದರೆ ಹೇಗೆ ನೀಡಬೇಕೆಂಬುದರ ಬಗ್ಗೆ ಮಹಾತ್ಮರುಗಳು ಬಹು ಅದ್ಭುತವಾದ ವಿಚಾರಗಳನ್ನು ಮಂಡಿಸಿದ್ದಾರೆ. ಆದರೆ ಸಿರಿಯ ಗಣಿ ಭೂತಾಯಿಗೆ ಕೊಡುವುದಷ್ಟೇ ಗೊತ್ತು. ಅದಕ್ಕೇ ಅವಳು ವರಸಿರಿಧಾತ್ರಿ ! ನಮಗೆ ಪಡೆವುದಷ್ಟೇ ಗೊತ್ತು ! ಆದರೆ ಆ ತಾಯಿಯಿಂದ ಪಡೆದುದನ್ನು ಬಿಟ್ಟು ( ಕೂಡಿಟ್ಟು) ತೃಪ್ತಿಯಿಲ್ಲದೆ ಮತ್ತೆ ಮತ್ತೆ ಬೇಡಿಕೆಯ ಪಟ್ಟಿ ಇಡುತ್ತಾ ಸಾಗುವ ನಾವು ಮೂಢ ಬಡವರಲ್ಲದೇ ಮತ್ತೇನು ? ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021