ಮಂತ್ರಾರ್ಥವರಿಯದಲೆ
ಪಠಣ ಮಾಡಿದೊಡೇನು ?
ಜಪಿಸಲೇನೊಮ್ಮನದಿ
ಅಳವಡಿಕೆಯಿರದೆ !?
ಪಠಿಸದಿರಲೇನು ಮಿಗೆ
ಚಾಗಭಾವದಿ ಬದುಕ
ಲದುವೆ ಶಾಂತಿಯ ಜಾಡೊ
ಜಾಣಮೂರ್ಖ //
ಮಂತ್ರದ ಅರ್ಥವನ್ನು ಅರಿಯದೇ ಯಾಂತ್ರಿಕವಾಗಿ ಪಠಿಸಿದರೆ ಪ್ರಯೋಜನವೇನು ? ಅದರ ಅರ್ಥವನ್ನು ಅರಿಯಬೇಕು. ಕೇವಲ ಅರ್ಥವರಿತು ಬದುಕಿದರಾಯ್ತೆ ? ಅಳವಡಿಸಿಕೊಳ್ಳಬೇಕು. ಮಂತ್ರಪಠಣ ಮಾಡದಿದ್ದರೇನಂತೆ ತ್ಯಾಗಭಾವದಿಂದ ಬದುಕಯ್ಯ ಗೆಳೆಯ. ಅದೇ ನಿಜವಾದ ಪರಮ ಶಾಂತಿಯ ಜಾಡು. ಆ ಜಾಡಿನ ಗುಂಟ ಸಾಗಿದರೆ ಬದುಕು ಸಾರ್ಥಕವಾಗುತ್ತದೆ. ಉಪದೇಶವು ಗುರುಮುಖೇನವಾಗಿಯೇ ಆಗಬೇಕು. ಅದರ ಪಠಣವು ನೂರೆಂಟು ಬಾರಿಯೋ , ಸಾವಿರದೆಂಟು ಬಾರಿಯೋ ಮಾಡುವುದಕ್ಕಿಂತ ಅಳವಡಿಸಿಕೊಂಡು ಜ್ಞಾನ ಮಾರ್ಗದಲ್ಲಿ ಬದುಕುವುದು ಬಹಳ ಮುಖ್ಯ. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021