ಯಾರ ಬಿಟ್ಟಿಹವಿಲ್ಲಿ
ಜರೆ ಮರಣ ರೋಗಗಳು !
ಯಾರ ವಶವಿಹವು ಪೇಳ್
ತನು ಮನಾದಿಗಳು !
ನಿನ್ನ ಕಣ್ ನಿನ್ನ ಬಾಯ್
ನಿನ್ನ ಹಿಡಿತದೊಳಿರವು !
ಒಡೆತನದ ಹುಚ್ಚೇಕೊ ?
ಜಾಣಮೂರ್ಖ//
ನಮ್ಮ ಸುತ್ತಲಿನ ಜನರ ಬದುಕು ನಮಗೊಂದು ಅರ್ಥಪೂರ್ಣ ಪಾಠ. ಹಾಗೇ ತದೇಕಚಿತ್ತತೆಯಿಂದ ಒಮ್ಮೆ ಗಮನಿಸಿ ! ಮುಪ್ಪು , ಮರಣ ,ಖಾಯಿಲೆಗಳಿಂದ ಯಾರು ಮುಕ್ತರಾಗಿದ್ದಾರೆ ಇಲ್ಲಿ ? ಅದು ಹೋಗಲಿ ಬಿಡಿ. ನಮ್ಮದೇ ಶರೀರ ಇದು. ನಮ್ಮದೇ ಮನಸ್ಸು ಕೂಡ. ಈ ಶರೀರವಾಗಲಿ, ಮನಸ್ಸಾಗಲಿ ನಮ್ಮ ನಿಯಂತ್ರಣಕ್ಕೆ ಒಳಪಟ್ಟಿವೆಯೇ ? ಮಾತು ಕೇಳುತ್ತವೆಯೇ !? ಅದೂ ಇಲ್ಲ. ನಮ್ಮ ಶರೀರದ ಅವಯವಗಳು ! ಕಣ್ಣು , ಬಾಯಿ ಇತ್ಯಾದಿಗಳಾವುವೂ ನಮ್ಮ ಮಾತನ್ನೇ ಕೇಳಲೊಲ್ಲವು ! ನಮ್ಮ ಹಿಡಿತಕ್ಕೆ ಬಾರವು ! ನಮ್ಮ ತನು ಮನಗಳನ್ನೇ ಸಂಬಾಳಿಸೋದಕ್ಕೆ ನಮ್ಮಿಂದ ಸಾಧ್ಯವಾಗದೇ ಇರುವಾಗ ಈ ಭೌತಿಕ ಜಗತ್ತಿನ ಒಡೆತನಕ್ಕೆ ಹಾರಾಡುವ , ಹೋರಾಡುವ ಈ ಹುಚ್ಚಾಟಕ್ಕೆ ಏನೆನ್ನಬೇಕು ? ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021