ಹಾಸುವೆಳೆ ನಾರ್ಪಿಡಿದು
ಹೊಸೆದು ಹೆಣೆವುದು ಹಿಸಿದು
ಹಂಸತೂಲಿಕೆಯೇಕೆ
ಈಸೆ ನಿದಿರೆಯನು !
ನಾಕದೊಳು ನಾಕವೈ
ಮೂಕಹಕ್ಕಿಯ ಗೂಡು
ಸಾಕು ಬಾ ಸಗ್ಗವಿದೆ
ಜಾಣಮೂರ್ಖ //
ಎಳೆಯ ಬಿಗಿಯಾದ ನಾರನ್ನು ಆರಿಸಿ , ಎಳೆದು , ಹಿಸಿದು , ಹೊಸೆದು ಗೂಡುಕಟ್ಟಿ ನಲಿವ ಗೀಜುಗನ ಗೂಡಿನ ಮುಂದೆ ಹಂಸತೂಲಿಕಾ ತಲ್ಪವಾದರೂ ಏಕೆ ? ಅದರಲ್ಲಿ ಮಲಗುವವರು ನಿಜವಾಗಿ ಸುಖನಿದಿರೆ ಮಾಡುವರೇನು ? ಆದರೆ ಈ ಮೂಕ ಹಕ್ಕಿಯು ಸದ್ದು ಗದ್ದಲವಿಲ್ಲದೆ ಕಟ್ಟುವ ಈ ಗೂಡು ಹಂಸ ತೂಲಿಕೆಗಿಂತಲೂ ಮಿಗಿಲು. ಮೂಕ ಹಕ್ಕಿ ಅಂತ ಏಕೆ ಬಳಸಿದೆ ಎಂದರೆ ಯಾರ ಗೊಡವೆಗೂ ಹೋಗದೇ ಮೌನವಾಗಿ ಕಾರ್ಯ ನಿರ್ವಹಿಸುತ್ತದೆಯಲ್ಲಾ ! ಅದಕ್ಕೆ. ಈ ಭುವಿಯೇ ಒಂದು ಸ್ವರ್ಗ, ಸ್ವರ್ಗದಲ್ಲಿ ಮತ್ತೊಂದು ಸ್ವರ್ಗ ! ಸಗ್ಗದೊಳಗೊಂದು ಸಗ್ಗ ! ಬದುಕಿನ ಜಂಜಾಟಗಳು ಇದ್ದದ್ದೇ ಬನ್ನಿರಿ ಗೆಳೆಯರೇ ! ಈ ಅಪರ ಸ್ವರ್ಗವನ್ನು ನೋಡಿ ನಲಿಯೋಣ. ನಮ್ಮ ನೆಲವನ್ನು ಸಗ್ಗವಾಗಿಸೋಣ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021