ಕೊಟ್ಟೊಂದ ಕಸಿದೊಂದ
ನೇಕೆ ನೋಳ್ಪನೊ ದೈವ !
ಒಬ್ಬಗೇನೀ ತೊಡಕು
ಅಖಿಲ ಸೃಷ್ಟಿಯದೊ !
ಮತ್ತೇಕೆ ಜಿಜ್ಞಾಸೆ
ಇದ್ದುದರೊಳಿತ್ತು ನಲಿ
ಪರಿಕಿಸುವ ದೈವ ಕಾಣ್
ಜಾಣಮೂರ್ಖ //
ಓ , ಗೆಳೆಯಾ ಆ ದೈವದ ಪರಿಯೇ ಹೀಗೆ. ಒಂದನ್ನು ಕೊಡುತ್ತಾನೆ. ಮತ್ತೊಂದನ್ನು ಕಿತ್ತುಕೊಳ್ಳುತ್ತಾನೆ. ಈ ಸೃಷ್ಟಿಯಲ್ಲಿ ಕೊರತೆ ಒಬ್ಬನಿಗೇನಲ್ಲ. ಎಲ್ಲರಿಗೂ ಇರುವುದೇನೇ. ಒಬ್ಬರಿಗೊಬ್ಬರು ಸಹಾಯಹಸ್ತವ ನೀಡಿ ಬಾಳಬೇಕಷ್ಟೆ. ಇರುವುದರಲ್ಲಿ ಸ್ವಲ್ಪವನ್ನು ಅಗತ್ಯವಿದ್ದವರಿಗೆ ನೀಡಿ ನಲಿಯೋಣ. ನಿಮ್ಮ ಕೊಡುಗೆಯ ಸಾರ್ಥಕತೆಯನ್ನು ಪಡೆದವನ ಕೃತಜ್ಞತಾ ಭಾವದಲ್ಲಿ ಕಾಣಿರಿ. ಪ್ರತಿಯಾಗಿ ಬೇರೇನನ್ನೂ ಬಯಸದಿರಿ. ಪ್ರತಿಯಾಗಿ ಮತ್ತೊಂದು ಕೊಡುಗೆ ನಿಮಗಾಗಿ ಕಾದಿರುತ್ತದೆ. ಇದರಲ್ಲಿ ಸಂದೇಹವಿಲ್ಲ. ದೈವವು ನಮ್ಮನ್ನು ಪರೀಕ್ಷಿಸುವ ಬಗೆಯೇ ಹೀಗೆ. ಆದರೆ ಕೊಡುವುದನ್ನು ಸತ್ಪಾತ್ರರಿಗೆ ಕೊಡಿ. ಅಜ್ಞಾನದಿಂದ ಅಪಾತ್ರರಿಗೆ ಕೊಟ್ಟು ಕೊಡುಗೆಗೆ ಅಪಚಾರಗೈಯ್ಯದಿರಯ್ಯ ಗೆಳೆಯ. ಅಂತಹಾ ಕೊಡುಗೆ ವ್ಯರ್ಥವೇ ಸರಿ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021