ಬಂಗಾರ ತುಂಬಲೇನ್
ಬಂಗ ತೀರದ ಮೇಲೆ
ಸಿಂಗಾರಗೊಂಡರೇ
ನರಿವಿರದ ಮೇಲೆ ?
ಬಂಗಾರ ಸಿಂಗಾರ
ರಂಗದಾ ಮೇಲಷ್ಟೆ !
ಪೆರರಾಟಕಣಿಯೆಲ್ಲ
ಜಾಣಮೂರ್ಖ //
ಕೆಲವರಿಗೆ ಬಂಗಾರದ ಒಡವೆಗಳ ಮೇಲೆ ಅದೆಷ್ಟು ಪ್ರೀತಿ ! ತಿಜೋರಿಯಲ್ಲಿ ತುಂಬಿದ್ದೇ ತುಂಬಿದ್ದು. ಅವರ ತಾಪತ್ರಯಗಳು, ತೊಂದರೆಗಳು ತೀರುವುದೇ ಇಲ್ಲ. ಬಂಗಪಟ್ಟು ಬಿಸಿಯನ್ನ ಉಣ್ಣುವುದಕ್ಕಿಂತಲೂ ತಂಗಳನ್ನವೇ ಲೇಸಲ್ಲವೇ ಗೆಳೆಯರೇ ? ಕೆಲವರಿಗಂತೂ ಆಸೆ , ಮೋಹಗಳು ಹೋಗುವುದೇ ಇಲ್ಲ. ಒಡವೆಗಳ ಹೊರೆ ಹೊತ್ತು ಭಾರದಿಂದ ಬೀಗುತ್ತಾರೆ. ತನುವು ಸಿಂಗಾರಗೊಂಡರಾಯ್ತೆ ? ಮನದ ಸಿಂಗಾರವೆಂತು ? ಇದೆಲ್ಲಾ ಕ್ಷಣಿಕವೆಂಬ ಅರಿವು ಬೇಕಷ್ಟೆ. ಈ ಬಂಗಾರ ಸಿಂಗಾರಗಳೆಲ್ಲ ಈ ಬಾಳ ನಾಟಕದ ರಂಗದ ಮೇಲಷ್ಟೆ ! ನಾವು ಒಂದನ್ನು ತಿಳಿದರೆ ಒಳಿತು ಎನಿಸುತ್ತಿದೆ. ಏನೆಂದರೆ ಇದೆಲ್ಲಾ ನಮ್ಮ ನಾಟಕ ಮುಗಿವನಕ ಅಷ್ಟೆ. ಆಮೇಲೆ ಮುಂದಿನ ಬೇರೆಯವರ ಮತ್ತೊಂದು ಆಟವಿದೆ! ಇದೆಲ್ಲಾ ಅದಕ್ಕೆ ಅಣಿಯಷ್ಟೆ ! ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021