ಗೊಂದಲದೊಳೊಂದು ಮರು
ಸಂದೆಯದ ಸುಳಿಯೇಳೆ
ಉತ್ತರವದೆಲ್ಲಿಹುದು
ಬಾಳ ಪಯಣದಲಿ !?
ಸಂದೆಯದ ಸಂದಿನಲಿ
ಬಾಳ ಭರವಸೆ ಸೋರೆ
ಪೋಪುದೆಲ್ಲಿಗೆ ಪೇಳು
ಜಾಣಮೂರ್ಖ //
ಒಮ್ಮೊಮ್ಮೆ ನಮ್ಮ ಮನಸ್ಥಿತಿ ಹೇಗಾಗುತ್ತದೆ ಎಂದರೆ ಗೊಂದಲದ ಗೂಡಾಗಿಬಿಡುತ್ತದೆ. ಮೊದಲೇ ಗೊಂದಲ ! ಅದರೊಳಗೆ ಮತ್ತೊಂದು ಸಂದೇಹ ! ಈ ಕೆಲಸ ಮಾಡುವುದೋ , ಬೇಡವೋ ! ಏನಾದರೂ ಕೆಟ್ಟದ್ದು ಸಂಭವಿಸಿದರೆ ಗತಿಯೇನು !? ಎಂದು ಮೊದಲೇ ಋಣಾತ್ಮಕವಾಗಿ ಚಿಂತಿಸುತ್ತಾ ಸಾಗಿದರೆ ಮನದ ಗೊಂದಲಕ್ಕೆ ಉತ್ತರ ಸಿಗುವುದಾದರೂ ಹೇಗೆ ? ಮನಸ್ಸಿನ ಸಂದೇಹಗಳನ್ನು ಬಿಡಯ್ಯಾ ಗೆಳೆಯ. ಒಳ್ಳೆಯದನ್ನು ಚಿಂತಿಸಿ ಕಾರ್ಯಪ್ರವೃತ್ತರಾದರೆ ಒಳ್ಳೆಯದೇ ಆಗುತ್ತದೆ. ಮತ್ತೆ ಸಂದೇಹದ ಸುಳಿಯೇಕೆ ? ಸಂದೇಹದ ಸಂದುಗಳಲ್ಲಿ ಬದುಕಿನ ಭರವಸೆಯೇ ಸೋರಿ ಹೋದರೆ ! ನಮ್ಮಲ್ಲೇ ನಮಗೆ ಅಪನಂಬಿಕೆ (Distrust with ourself !) ಉಂಟಾದರೆ ಯಾರ ಬಳಿ ಹೋಗುವುದು ? ಅಲ್ಲವೇ ಗೆಳೆಯರೇ ? ಆದ್ದರಿಂದ ಒಳ್ಳೆಯ ಉದ್ದೇಶ ಮತ್ತು ಆತ್ಮವಿಶ್ವಾಸದಿಂದ ಬದುಕಿನಲ್ಲಿ ಮುನ್ನಡೆಯಬೇಕು. ಒಂದುವೇಳೆ ಸೋತರೇನಂತೆ ? ಮತ್ತೆ ಪ್ರಯತ್ನಿಸಿ ಗೆದ್ದರಾಯ್ತು ಎಂಬ ಧೈರ್ಯದಿಂದ ಮುನ್ನಡೆಯಬೇಕು. ಮತ್ತೇನಾದರೂ ಗೊಂದಲವೇ ?!!
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021