ಅನ್ನಬೊಮ್ಮನು ದಿನವು
ಚೈತನ್ಯವೀವನೈ !
ಜ್ಞಾನಬೊಮ್ಮನು ಅರಿವ
ದಾರಿಯನು ತೋರ್ವ !
ಬದುಕನಿತ್ತಿಹ ಪಂಚ
ಭೂತಂಗಳೊಲುಮಿರಲ
ದೆಲ್ಲಿ ಹುಡುಕುವೆಯವನ !
ಜಾಣಮೂರ್ಖ //
ಈಗ ಈ ವಿಚಾರ ಎಷ್ಟು ವಿಚಿತ್ರ ಎಂದರೆ ಸತ್ಯವು ನಮಗೆ ತಿಳಿದಿದ್ದರೂ ಕೂಡ ಮತ್ತೆ ಮತ್ತೆ ಅದೇ ತಪ್ಪು ಮಾಡುತ್ತೇವೆ. ಭಗವಂತನು ನಮ್ಮನ್ನು ಕಾಪಾಡುತ್ತಾನೆ ಹೌದು ತಾನೆ ? ಯಾವಾಗ ? ಹೇಗೆ ? ಯಾವ ರೂಪದಲ್ಲಿ ? ಈ ಪ್ರಶ್ನೆಗಳನ್ನು ಹಾಕಿಕೊಳ್ಳೋಣ. ಅನ್ನಬ್ರಹ್ಮನು ಹಸಿವನ್ನು ಕಳೆದು ಚೈತನ್ಯವೀಯುತ್ತಾನೆ ! ಜ್ಞಾನ ಬ್ರಹ್ಮನು ಅರಿವಿನ ಬಲದಿಂದ ಬದುಕುವ ದಾರಿಯನ್ನು ತೋರುತ್ತಾನೆ. ನಾವು ಬದುಕಲು ಪಂಚಭೂತಗಳು ಬೆನ್ನೆಲುಬಾಗಿವೆ. ಇವುಗಳಲ್ಲಿ ಒಂದಿಲ್ಲದಿದ್ದರೂ ಬದುಕೇ ಇಲ್ಲ. ಹೆಜ್ಜೆ ಹೆಜ್ಜೆಗೂ ನಮ್ಮ ಬದುಕಿಗೆ ಆಧಾರವಾಗಿರುವ ಈ ಎಲ್ಲಾ ಭಗವದಂಶಗಳನ್ನು ಲೆಕ್ಕಿಸದೇ ಆ ದೇವರನ್ನು ಎಲ್ಲೆಲ್ಲೋ ಹುಡುಕುತ್ತಿದ್ದೇವಲ್ಲಾ ನಾವು ! ಸ್ವಲ್ಪ ಹಾಗೇ ಪರಾಮರ್ಶಿಸಿ ದೇವನು ಸದಾಕಾಲ ನಮ್ಮ ಜೊತೆಯಲ್ಲೇ ಇದ್ದಾನೆ ! ನೋಡುವ ಕಣ್ಣು ಬೇಕಷ್ಟೆ ನಮಗೆ. ನಮ್ಮ ಹಿರಿಯರು ಅವನನ್ನು ಭಕ್ತರ ಬಂಧು ಎನ್ನುತ್ತಿದ್ದರು. ಆದರೆ ಅಷ್ಟೇ ಅಲ್ಲ. ಅವನು ಭಾವಬಂಧುವೂ ಹೌದು. ಯದ್ಭಾವಂ ತದ್ಭವತಿ ಮನಸ್ಸಿನಂತೆ ಮಹದೇವ ಎನ್ನುವರಲ್ಲಾ ಹಾಗೆ. ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021