ಹೃದಯ ವಿಡಿವವಗೆ ಜಗ
ವೊಂದು ಸುಂದರ ಗುಡಿಯು
ಮಿಡಿಯದವಗೇನಿಹುದು
ಬರಿ ಕಲ್ಲು ಮಣ್ಣು !
ಕಾಣ್ವವಗೆ ಕಲ್ಲಿನಲು
ದೇವನಿಹ ವೈಚಿತ್ರ್ಯ !
ಕಾಣ್ದವಗೆ ಜೀವಜಡ
ಜಾಣಮೂರ್ಖ //
ಶರೀರದಲ್ಲಿನ ಭೌತಿಕವಾದ ಹೃದಯ ಎಲ್ಲರಿಗೂ ಇರುವುದಾದರೂ ಅದು ಭಾವುಕತೆಯಿಂದ ಮಿಡಿಯಬೇಕು. ಹಾಗೆ ಹೃದಯ ಮಿಡಿಯುವವರಿಗೆ ಇಡೀ ಜಗತ್ತೇ ಒಂದು ಸುಂದರ ಗುಡಿ. ವಿಶ್ವದ ಚರಾಚರ ವಸ್ತುಗಳೆಲ್ಲದರಲ್ಲೂ ಅಡಗಿರುವ ಚೈತನ್ಯವನ್ನು ಅವರು ಗುರ್ತಿಸಬಲ್ಲರು. ಹೃದಯ ಮಿಡಿಯದವರಿಗೆ ಅನಂತ ಸೃಷ್ಟಿಯೇ ಬರೀ ಕಲ್ಲು… ಮಣ್ಣು… ಕಾಡು….ಮೇಡು….ಅಷ್ಟೆ. ತನ್ನೊಳಗಿನ ಚೈತನ್ಯವನ್ನೇ ಅವರು ಕಾಣರು ! ಇನ್ನು ಅಖಂಡ ಸೃಷ್ಟಿಯಲ್ಲಡಗಿರುವ ಚೈತನ್ಯದ ಮಾತೆಲ್ಲಿ !? ಕಾಣ್ವ ಕಣ್ಣಿರುವವರು ಕಲ್ಲು ಮಣ್ಣಿನಲ್ಲು ಭಗವಂತನನ್ನೇ ಕಾಣುತ್ತಾರೆ. ಆ ಕಣ್ಣು ಅರ್ಥಾತ್ ದೃಷ್ಟಿಕೋನ ಇಲ್ಲದವರಿಗೆ ಜಗತ್ತು ಜೀವಂತಿಕೆಯಿಂದ ತುಂಬಿದ್ದರೂ ಜಡವಾಗಿ ತೋರುತ್ತದೆ. ಅಲ್ಲವೇ ಗೆಳೆಯರೇ ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021