ಎಡವಿದೆಡೆಯಲೆ ಮತ್ತೆ
ಎಡವದಿರು ಓ ಮನವೆ !
ಪಿಂತಿನೆಡಹಿನ ಕತೆಯ
ಮರೆಯದಿರು ಮನವೆ !
ಸೋತ ಧರ್ಮಜ ಮತ್ತೆ
ಲೆತ್ತಕ್ಕೆ ಚಿತ್ತಕೊಡೆ
ಯುದ್ಧಕಾಯ್ತದು ಹೇತು
ಜಾಣಮೂರ್ಖ //
ಓ, ಗೆಳೆಯಾ ! ನಾವು ಬದುಕಿನಲ್ಲಿ ಮತ್ತೆ ಮತ್ತೆ ಎಡವುತ್ತಿದ್ದೇವೆ. ಅದೂ ಎಡವಿದ ಎಡೆಯಲ್ಲೆ ಮತ್ತೆ ಎಡವುತ್ತಿದ್ದೇವೆ. ಇದು ಇಂದು ನಿನ್ನೆಯದಲ್ಲ . ಪುರಾತನ ಕಾಲದಿಂದಲೂ ಹೀಗೇನೆ. ಆ ಹಿಂದಿನ ಕತೆಯನ್ನು ನಾವು ಮರೆಯಬಾರದಷ್ಟೆ. ಮೊದಲ ಬಾರಿ ಲೆತ್ತದಲ್ಲಿ ಸೋತ ಧರ್ಮಜನನ್ನು ದುರ್ಯೋಧನ ಮತ್ತೆ ಲೆತ್ತವಾಡಲು ಕರೆಯುತ್ತಾನೆ. ವಿಧುರನು ಬೇಡವೆಂದು ಹೇಳಿದರೂ ಸಹ ಧರ್ಮಜನು ಮತ್ತೆ ಪಗಡೆಯಾಡಿ ಎಲ್ಲವನ್ನೂ ಕಳೆದುಕೊಂಡು , ಕಡೆಗೆ ತನ್ನ ಪತ್ನಿ ದ್ರೌಪದಿಯನ್ನೂ ಫಣಕ್ಕಿಡುತ್ತಾನೆ. ಹೀಗೆ ಎಡವಿದ ಕಡೆಯಲ್ಲೇ ಮತ್ತೆ ಎಡವಿದ. ತೆಗೆದುಕೊಂಡ ಒಂದು ದುಡುಕು ನಿರ್ಧಾರ ಘೋರ ಮಹಾಭಾರತ ಯುದ್ಧಕ್ಕೆ ಕಾರಣವಾಗಿಬಿಟ್ಟಿತು. ಆದ್ದರಿಂದ ನಾವು ಆಡುವ ನುಡಿ , ಮಾಡುವ ಕಾರ್ಯಗಳು ದೂರದೃಷ್ಟಿಯಿಂದ ಮಾಡಬೇಕು. ದುಡುಕಬಾರದು. ದುಡುಕಿ ಅನಾಹುತಗಳಿಗೆ ಎಡೆಮಾಡಿಕೊಡಬಾರದು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021