ದೇವಂಗೆ ಹೂವಿತ್ತು
ಮೌನತಳೆವುದು ಬಳ್ಳಿ !
ಕುಕಿಲ ಸಂತಸಮಿತ್ತು
ಹೋಹುದೈ ಹಾರಿ !
ಅಹಮಿಕೆಯ ತೊರೆದು ತಾ
ಸಾಜದೊಳು ಬಾಳ್ವಂತೆ
ಕೊಟ್ಟು ಮರೆಯುತ ಸರಿಯೊ
ಜಾಣಮೂರ್ಖ//
ಭಕ್ತಿ ಭಂಡಾರಿ ಬಸವಣ್ಣನವರು ತಮ್ಮ ಒಂದು ವಚನದಲ್ಲಿ -“ಮಾಡುವ ಮಾಟದೊಳು ತಾನಿಲ್ಲದಂತಿರಬೇಕು ; ಶಿವನ ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು” ಎಂದಿದ್ದಾರೆ. ಹಾಗೆಯೇ ಭಗವಂತನ ಅರ್ಚನೆಗೆ ಹೂವನಿತ್ತು ಬಳ್ಳಿ ಮೌನಿಯಾಗುತ್ತದೆ ! ಕೋಗಿಲೆಯು ಮಧುರವಾದ ಕೂಗಿತ್ತು ಪ್ರಪಂಚವನ್ನು ಗಂಧರ್ವ ಲೋಕವನ್ನಾಗಿಸಿ ತಾನೆತ್ತಲೋ ಮೌನವಾಗಿ ಹಾರಿ ಹೋಗುತ್ತದೆ. ಓ ಗೆಳೆಯ ನಾವೂ ಸಹ ಹಾಗೆಯೇ ಇರಬೇಕು. ಸತ್ಕರ್ಮಗಳನ್ನೆಸಗಿ ಮೌನದಿಂದ , ಸಹಜವಾಗಿ ಬದುಕಬೇಕು. ನಾನೆಂಬ ಅಹಂಕಾರವು ಸುಳಿಯದಂತೆ ಎಚ್ಚರವಹಿಸಬೇಕು. ಎಂತಹಾ ಸುಂದರ ಬದುಕದು ? ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021