ಜಗದ ಹೂ ದೋಟದಲಿ
ತರತರಹೆ ಹೂವುಗಳು
ಮುಳ್ಳಿದ್ದರಿರಲಿ ಬಿಡು
ಹೂಮನಸ ನೋಡು !
ಅಂಗರಕ್ಷಕ ಮುಳ್ಳು
ದೈವಸೃಷ್ಟಿಗೆ ಎಣೆಯೆ ?
ಹೂವ ಪಿಡಿ ಹೂವಾಗು
ಜಾಣಮೂರ್ಖ !
ಈ ಜಗತ್ತೇ ಭಗವಂತನ ಒಂದು ಹೂದೋಟ. ಇಲ್ಲಿದೋ ತರತರಹೆಯ ಹೂವುಗಳು! ಮೃದು ಮಧುರಾತಿ ಮಧುರ ! ಅಲ್ಲಲ್ಲಿ ದೇವನ ಮಕ್ಕಳಿಗೆ ಅಂಗರಕ್ಷಕರಂತೆ ಮುಳ್ಳುಗಳು ! ಅವುಗಳ ಪಾಡಿಗೆ ಅವಿರುತ್ತವೆ. ದೈವಸೃಷ್ಟಿಗೆ ಸಾಟಿಯೇ ಇಲ್ಲ ! ಅದಕ್ಕೆ ಅದೇ ಸಾಟಿ ! ನಾವು ಹೂಮನಸ ನೋಡಬೇಕಷ್ಟೆ ! ನೋಡನೋಡುತ್ತ ನಾವೂ ಹೂವಾಗಿಬಿಡಬೇಕು ! ಆದರೆ ನಾವು ಮಾಡುತ್ತಿರುವುದೇನು ? ಸ್ವಲ್ಪ ಚಿಂತಿಸಿ ಗೆಳೆಯರೇ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021