ಗಳಿಕೆ ಬದುಕಲ್ಕೆ ದಿಟ
ಗಳಿಕೆಗಾಗಿಯೆ ಬದುಕೆ ?
ಲೋಗರನ್ನವ ಕಸಿದು
ಗಳಿಸುಳಿಸಲೇನು ?
ನಿನ್ನುಳಿಕೆ ಗಳಿಕೆಗಳು
ಕಸಿಯೆ ಪರರನ್ನವದು
ಜಗದ ನೋವಿನ ಹೇತು
ಜಾಣಮೂರ್ಖ //
ಇಂದು ಜಗತ್ತು ಗಳಿಸುವತ್ತ ದಾಪುಗಾಲಿಕ್ಕಿ ಸಾಗುತ್ತಿದೆ. ಆದರೆ ಗಳಿಸುವುದೊಂದೇ ಬದುಕೇನು ?ಅಳತೆ ಮೀರಿ ಗಳಿಸಿ , ಮನೆಯ ಭಂಡಾರದಲ್ಲಿಟ್ಟು ಕೊಳೆಸಿದರೆ ! ನಾಯ್ಮೊಲೆಯ ಹಾಲಾಗಿಸಿದರೆ ! ಅದು ಯಾರದೋ ಅನ್ನ ಕಣಯ್ಯ. ನಮ್ಮ ಉಳಿಕೆ ಮತ್ತೊಬ್ಬನ ಹಸಿವಿಗೆ ಕಾರಣವಾಗುವುದಾದರೆ ಅಂತಹಾ ಗಳಿಕೆ ಉಳಿಕೆಗಳಿಂದ ಪ್ರಯೋಜನವೇನು ? ಅಂತಹಾ ಗಳಿಕೆ ಜಗದ ಹಸಿದ ಜನರ ನೋವಿಗೆ ಕಾರಣ. ಮನೆಯ ಮಕ್ಕಳ ಸೋಮಾರಿತನಕ್ಕೆ ಕಾರಣ. ಗಳಿಕೆ ನ್ಯಾಯಸಮ್ಮತವಾಗಿರಬೇಕು , ಲೋಗರ ನೋವಿಗೆ ಕಾರಣವಾಗುವ ಗಳಿಕೆ ಉಳಿಕೆಗಳನ್ನು ಭಗವಂತ ಕೂಡ ಮೆಚ್ಚನು. ಭೌತಿಕ ಸಂಪತ್ತನ್ನು ಬಿಡಿ, ಕಳ್ಳ ಸುಳ್ಳರೂ ಗಳಿಸುತ್ತಾರೆ. ಆದರೆ ಅಭೌತಿಕವಾದ ಸಂಪತ್ತಿದೆ ಗೊತ್ತೆ !? ಅಂತಹಾ ಸಂಪತ್ತನ್ನು ನಿನ್ನದಾಗಿಸಿಕೊಳ್ಳಯ್ಯ ಗೆಳೆಯ.
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021