ಬಿಟ್ಟನೆಂದರು ಬಿಡದು
ಬಂಧನವಿದೆಂತದಿದು ?
ಬದುಕಿನೀ ಜಾತಿಮತ
ಮಸಣವನು ಬಿಡದು !
ಕತ್ತಲಿದ್ದರೆ ಇರಲಿ
ಬೆಳೆಕಿನೆಡೆಗೈದಲೇನ್ ?
ಬಿಡದೊ ಬಂಧನವದಕು ಜಾಣಮೂರ್ಖ //
ಈ ಬದುಕಿನಲ್ಲಿ ಏನೇ ಮಾಡಿದರೂ ಬಂಧನಗಳಿಂದ ಬಿಡಿಸಿಕೊಳ್ಳಲು ಆಗುವುದಿಲ್ಲ. ನೋಡುತ್ತಿದ್ದೇವಲ್ಲಾ ನಾವು ! ಬದುಕಿರುವಾಗ ಅದು ನಮ್ಮ ಜಾತಿ , ಇದು ನಿಮ್ಮ ಜಾತಿ , ಮತ , ಧರ್ಮ ಎಂದು ಹೊಡೆದಾಡುವ ನಾವು ಸತ್ತ ಮೇಲೆ ! ಸತ್ತವರು ಸಾಯುತ್ತಾರೆ. ಇರುವವರು ! ಇದು ನಮ್ಮ ರುದ್ರಭೂಮಿ ಎನ್ನುತ್ತಾರೆ. ಎಂತಹಾ ವಿಪರ್ಯಾಸವಿದು ? ಬದುಕಿನಲ್ಲಿ ಅಂಧಕಾರ ಅಜ್ಞಾನ ತುಂಬಿರಲೇನು ? ಕತ್ತಲಿನಿಂದ ಬೆಳಕಿನೆಡೆಗೆ ಬರಬಹುದಲ್ಲವೇ ? ಆದರೆ ಬರಲಾಗುತ್ತಿಲ್ಲ. ಕಾರಣ ಈ ಬಂಧನ. ಇದರಿಂದ ಬಿಡಿಸಿಕೊಂಡವರು ಮಹಾ ಮಹಿಮರಾಗುತ್ತಾರೆ , ಸಂತರಾಗುತ್ತಾರೆ. ಅಲ್ಲವೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021