ರಾವಣನ ಹಣೆಯೊಳಿರೆ
ಮರಣಶಾಸನ ಮತ್ತೆ
ಬೊಮ್ಮ ಬಂದನೆ ವರವ
ತಿದ್ದಿ ಬರೆಯಲ್ಕೆ !
ಸಾಗರದ ನೀರಿನೊಳು
ಬಂಡೆಗಳು ತೇಲಿದವು
ನಿಯತಿಯನು ಮೀರ್ದರಾರ್ ?
ಜಾಣಮೂರ್ಖ //
ರಾವಣ ಸಾವು ಬರದಂತೆ ವಿಧಾತನಿಂದ ವರವನ್ನೇನೋ ಪಡೆದ. ಆದರೆ ಮಾನವನೊಬ್ಬನಿಂದ ಮರಣ ಎಂದು ಆಗಲೇ ಬರೆದಾಗಿತ್ತು. ನನ್ನಂತಹಾ ಪರಾಕ್ರಮಶಾಲಿಯನ್ನು ಒಬ್ಬ ಮನುಷ್ಯಮಾತ್ರದವನು ಕೊಲ್ಲಲು ಸಾಧ್ಯವೇ ! ಎಂದು ಉದಾಸೀನದಿಂದ ಸುಮ್ಮನಾದ. ಆದರೆ ಶ್ರೀ ಹರಿಯೇ ರಾಮನಾಗಿ ಮಾನವ ರೂಪಿನಿಂದ ಬಂದ. ಸಾಗರದ ಅಲೆಗಳಲ್ಲಿ ಕಪಿವೀರರು ಹಾಕಿದ ಬಂಡೆಗಳು ತೇಲಿದವು ! ಸಾಗರಕ್ಕೆ ಸೇತುವೆಯೇ ನಿರ್ಮಾಣವಾಯ್ತು ! ಹಣೆಬರಹವನ್ನು ಬರೆದ ಮೇಲೆ ಮುಗಿಯಿತು ? ಬರೆದವನಿಂದಲೇ ಬದಲಾಯಿಸಲಾಗದು . ನಿಯತಿಯನ್ನು ಮೀರಿದವರು ಯಾರಿದ್ದಾರೆ ಈ ಜಗತ್ತಿನಲ್ಲಿ !? ವಿಧಿಯ ಅಣತಿಯಂತೆ ಏನು ಘಟಿಸಬೇಕೋ ಅದಕ್ಕೆ ಪ್ರಕೃತಿಯಲ್ಲಿ ಎಲ್ಲವೂ ತಾವಾಗೇ ಸಿದ್ಧವಾಗಿಬಿಡುತ್ತದೆ. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021