ದೊಡ್ಡ ಮನೆಯಿರಲೇನು
ದೊಡ್ಡ ಮನವಿರದಿರಲು !
ಧನಕನಕವಿದ್ದರೇನ್ ?
ದಡ್ಡತನವಿರಲು !
ದೊಡ್ಡತನಕಡ್ಡವಿರೆ
ಬಿಡು ದೊಡ್ಡದೆಲ್ಲವನು
ಸಿದ್ಧನಾಗೆದ್ದೇಳೊ
ಜಾಣಮೂರ್ಖ //
ದೊಡ್ಡ ಮನಸ್ಸಿಲ್ಲದಿದ್ದರೆ ದೊಡ್ಡದಾದ ಮನೆಯಿದ್ದೇನು ಪ್ರಯೋಜನ ? ಮನೆತುಂಬ ಧನಕನಕಗಳು ತುಂಬಿದ್ದರೂ ವಾರಸುದಾನು ದಡ್ಡನಾಗಿದ್ದರೆ ಪ್ರಯೋಜನವೇನು ? ನಮ್ಮಲ್ಲಿನ ಉದಾತ್ತತೆಗೆ, ದೊಡ್ಡತನಕ್ಕೆ ಯಾವುದು ಅಡ್ಡಗಾಲಾಗುವುದೋ ಅದನ್ನು ಬಿಟ್ಟುಬಿಡಯ್ಯಾ ಗೆಳೆಯಾ !
ಇದರಿಂದ ಸಿದ್ಧಪುರುಷರಾಗಿಬಿಡುತ್ತೇವೆ. ನಮ್ಮ ಅಹಂಕಾರಕ್ಕೆ ಕಾರಣವಾದುದರ ವರ್ಜ್ಯವು ನಮ್ಮನ್ನು ದೈವಚಿತ್ತಕ್ಕೆ ಪ್ರಿಯರನ್ನಾಗಿಸುತ್ತದೆ. ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021