ಜಗವ ಬೆಳಗುವ ಸೂರ್ಯ
ಚಂದ್ರಗೂ ಗ್ರಹಣವಿದೆ !
ತೊತ್ತುಗೊಳಲೇನು ತಮ
ಮತ್ತೆ ಬೆಳಗುವರೊ !
ಸತ್ಯಸೂರ್ಯನ ಮಿಥ್ಯ
ತೊತ್ತುಗೊಳೆ ಕತ್ತಲಿಗೆ
ತುತ್ತಾಗುವುದೆ ಸತ್ಯ ?
ಜಾಣಮೂರ್ಖ //
ಇಡೀ ಜಗತ್ತನ್ನೇ ಬೆಳಗೋ ಸೂರ್ಯ ಚಂದ್ರರನ್ನೇ ಗ್ರಹಣವು ನುಂಗಿಬಿಡುವುದು. ಅವರೂ ಕೂಡ ಮರೆಯಾಗುವರು. ಜಗತ್ತಿಗೇ ಕತ್ತಲು ತುಂಬಿಕೊಳ್ಳುವುದು. ಆದರೇನಂತೆ !? ಅದು ಕೆಲಕಾಲ ಮಾತ್ರ. ಶಾಶ್ವತವಾಗಿ ಮರೆಯಾಗುವರೇನವರು ? ಮತ್ತೆ ಎಂದಿನಂತೆಯೇ ಬೆಳಗುವರು ತಾನೆ? ಹಾಗೆಯೇ ಸತ್ಯವೂ ಕೂಡ. ಮಿಥ್ಯವೆಂಬ ಅಂಧಕಾರವು ತತ್ಕಾಲಕ್ಕೆ ಮುಚ್ಚಿರಬಹುದು.ಆದರೆ ಅದು ಶಾಶ್ವತವಲ್ಲ. ಮಿಥ್ಯದ ಪೊರೆ ಕಳಚಿದ ಮೇಲೆ ಸತ್ಯ ಸೂರ್ಯನ ಬೆಳಗುವಿಕೆಯನ್ನು ತಡೆಯಲಾದೀತೆ ? ಮಿಥ್ಯಕ್ಕೆ ತತ್ಕಾಲದ ಜಯವೇ ಹೊರತು ಶಾಶ್ವತ ಜಯವಲ್ಲ. ಅಂತೆಯೇ ಸತ್ಯಕ್ಕೆ ತತ್ಕಾಲದ ಸೋಲಾದರೂ ಜಯವು ನಿಶ್ಚಿತ ! ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021