ಬಿಸಿಲೆಂತೊ ನೆಳಲಂತು !
ಹಗಲೆಂತೊ ಇರುಳಂತು
ಒಳಿತೆಂತೊ ಕೆಡುಕಂತು
ಬಾಳ ಪಯಣದಲಿ !
ಬೇಕುಬೇಡಗಳ ಜಗ
ಸಾಕೆನಿಪುದೇನಿಲ್ಲಿ !
ವೈವಿಧ್ಯಮಯವೆಲ್ಲ
ಜಾಣಮೂರ್ಖ//
ಈ ಜಗತ್ತೇ ಹೀಗೆ. ಇಲ್ಲಿ ಬಿಸಿಲು ಹೇಗೋ ನೆಳಲೂ ಇದೆ ! ಹಗಲಿದ್ದ ಹಾಗೆ ಇರುಳೂ ಇದೆ ! ಹಾಗೆಯೇ ಒಳಿತಿದ್ದ ಹಾಗೆ ಕೆಡುಕೂ ಇದೆ. ಈ ವೈವಿಧ್ಯಮಯ ಜಗತ್ತಿನಲ್ಲಿ ನಮ್ಮ ಬದುಕು ಅರಳುತ್ತಿದೆ. ಒಬ್ಬರಿಗೆ ಬೇಕಾದದ್ದು ಇನ್ನೊಬ್ಬರಿಗೆ ಬೇಡ. ಆದರೆ ಯಾವುದೂ ಸಾಕೆನಿಸದು ! ಜಗತ್ತು ಸಾಗಲು ಎಲ್ಲವೂ ಬೇಕು. ಷಡ್ರಸೋಪೇತ ಭೋಜನದಂತೆ ! ಒಂದರಿಂದ ಇನ್ನೊಂದರ ಮಹತ್ವವೂ, ಪ್ರಾಮುಖ್ಯತೆಯೂ ಅರಿವಾಗುತ್ತದೆ. ಇದರಿಂದ ತಿಳಿಯುವ ಮತ್ತೊಂದು ಅಂಶವೆಂದರೆ ಈ ಸೃಷ್ಟಿಯು ನನಗೊಬ್ಬನಿಗಾಗಿ ಮಾತ್ರ ಅಲ್ಲ ! ಎಲ್ಲರೊಳಗೆ ನಾನೂ ಒಬ್ಬನಾಗಿದ್ದು ಪ್ರೀತಿಯಿಂದ ಬದುಕಬೇಕು ! ಎಂಬ ದಿವ್ಯತತ್ತ್ವ ! ಪ್ರತಿಯೊಬ್ಬರೂ ಇದನ್ನು ಅರಿತು ನಡೆದರೆ ಜಗತ್ತು ರಾಮರಾಜ್ಯವಾಗುತ್ತದೆ ! ಏನಂತೀರಿ ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021