ನಾಮರೂಪಿನ ದಿವ್ಯ
ಧಾಮದೊಳಗೆಂತ ಪರಿ
ಕಂಡು ಕಾಣದು ಕಿವಿಯು
ಕೇಳ್ದರೂ ಮಂದ !
ಕಂಡು ಕಾಣದ ಕಿವಿಗೆ
ಕೇಳಿಯೂ ಕೇಳದುದ
ಕಂಡು ಕೇಳೇಳಯ್ಯ
ಜಾಣಮೂರ್ಖ //
ಈ ಭೂವಿಯ ಮೇಲೆ ಎಲ್ಲಕ್ಕೂ ಹೆಸರಿದೆ ! ಆಕಾರವಿದೆ ! ಇದೆಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದ ಮೇಲೆ ಭಗವಂತನೂ ಇದ್ದಾನೆ ತಾನೆ ! ಎಲ್ಲವೂ ಜೀವಂತಿಕೆಯಿಂದ ಕ್ಷಣಕ್ಷಣವೂ ಚೈತನ್ಯ ಸ್ವರೂಪಿಯಾಗಿದ್ದರೂ ಭೌತಿಕವಾದುದು ಮಾತ್ರ ಕಾಣುತ್ತಿದೆ, ಕೇಳುತ್ತಿದೆ. ಆದರೆ ಕಂಡೂ ಕಾಣದ , ಕೇಳಿಯೂ ಕೇಳದ , ಅಖಂಡ ಸೃಷ್ಟಿಯ ಸೃಷ್ಟಿ ಸ್ಥಿತಿ ಲಯಗಳಿಗೆ ಹೇತುವಾದ ಅಭೌತಿಕ ಶಕ್ತಿ ಮಾತ್ರ ನೇಪಥ್ಯಕ್ಕೆ ಸರಿದಿದೆ. ಆ ಶಕ್ತಿಯನ್ನು ಕಾಣುವ ಕಣ್ಣಿದ್ದೂ ಕಾಣದಿದ್ದರೆ, ಕೇಳ್ವ ಕಿವಿಯಿದ್ದೂ ಕೇಳದಿದ್ದರೆ ಇಂತಹಾ ಶ್ರೇಷ್ಠವಾದ ಮಾನವ ಜನ್ಮವನ್ನು ಪಡೆದು ಪ್ರಯೋಜನವಾದರೂ ಏನು ? ಭೌತಿಕ ಜಗತ್ತನ್ನು ಎಲ್ಲರೂ ಕಾಣುತ್ತಾರಾದರೂ ಅದರಲ್ಲಡಗಿರುವ ಅಭೌತಿಕತೆಯನ್ನು , ಪರಮಾತ್ಮ ತತ್ತ್ವವನ್ನು ಗುರುತಿಸಲು ಹೃದಯದ ಕಣ್ಣು ತೆರೆದು ಪ್ರೀತಿಯಿಂದ ನೋಡಬೇಕು. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021