ದೊಡ್ಡವನು ತಾನೆಂಬ
ದಡ್ಡತನವೇಕೆ ಬಿಡು
ಖೆಡ್ಡ ತೋಡಿಹುದು ವಿಧಿ
ಮಡ್ಡ ಮಾನಸಿಯೇ !
ದೊಡ್ಡ ತಾನೆಂದವರು
ಅಡ್ಡಡ್ಡ ಮಲಗಿಹರು
ದೊಡ್ಡತನದೊಳು ಬದುಕೊ
ಜಾಣಮೂರ್ಖ //
ಸಾಮಾನ್ಯವಾಗಿ ನಮ್ಮ ವರ್ತನೆಗಳಲ್ಲಿ ಸಾರತಃ ನಾನು ದೊಡ್ಡವನೆಂಬ ಭಾವವಿರುತ್ತದೆ. ಅದು ಅಂತಹಾ ತಪ್ಪೇನೂ ಅಲ್ಲ ಆದರೆ ಅತಿಯಾಗಬಾರದಷ್ಟೆ. ಅತಿಯಾದರೆ ಅದು ನಮ್ಮ ದಡ್ಡತನವಷ್ಟೆ. ವಿಧಿಯ ಅಣತಿಯಂತೆ ಏನು ನಡೆಯಬೇಕೋ ಅದು ನಡದೇ ತೀರುತ್ತದೆ. ತಾನು ದೊಡ್ಡವನು ಎಂದು ಮೆರೆದವರೆಲ್ಲಾ ಕಾಲಗರ್ಭದಲ್ಲಿ ಹುದುಗಿ ಹೋಗಿದ್ದಾರೆ. ಅಡ್ಡಡ್ಡ ಮಲಗಿದ್ದಾರೆ. ಹಾಗಾಗಿ ನಾವು ಈ ಅಹಂಕಾರವನ್ನು ತೊರೆದು ಸೃಷ್ಟಿಯ ಅಗಾಧತೆಯಲ್ಲಿ ನಾನೊಂದು ಸಣ್ಣಕಣವೆಂಬ ಭಾವದಲ್ಲಿ ದೊಡ್ಡತನವನ್ನು ಮೆರೆಯುತ್ತಾ ಬದುಕನ್ನು ಸಾಗಿಸಿದರೆ ಬದುಕು ಎಷ್ಟು ಚಂದ ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021