ಹತ್ತು ತಲೆ ರಾವಣನು
ಹೊತ್ತೊಯ್ದ ಸೀತೆಯನು
ಹತ್ತಿ ಉರಿಯಿತು ಲಂಕೆ
ಹತನಾದನಯ್ಯೊ !
ಹತ್ತು ತಲೆಯಿರಲೇನು !
ಹೊತ್ತದಾಯಿತು ಬೆಳಕು
ಹೊತ್ತೊಯ್ದಿತೈ ವಿಧಿಯು
ಜಾಣಮೂರ್ಖ //
ಹತ್ತು ತಲೆಯ ರಾವಣ ಮಹಾನ್ ಪಂಡಿತ , ಶಾಸ್ತ್ರಜ್ಞ ! ವೀರ, ಶೂರ, ಪರಾಕ್ರಮಶಾಲಿ ! ಎಲ್ಲಕ್ಕಿಂತ ಹೆಚ್ಚಾಗಿ ಮಹಾನ್ ಶಿವಭಕ್ತ. ಆದರೇನು ? ಸೀತಾಮಾತೆಯನ್ನು ಅಪಹರಿಸಿದ. ಸ್ವರ್ಣಲಂಕೆಯು ಬೂದಿಯಾಯಿತು. ಹತ್ತು ತಲೆಯಿದ್ದ ರಾವಣನ ಸ್ಥಿತಿಯೇ ಹೀಗಾದರೆ ನಮ್ಮಂತಹಾ ಸಾಮಾನ್ಯರ ಗತಿಯೆಂತು ? ಹತ್ತು ತಲೆಯಿದ್ದರೂ ಅರಿವಿನ ಬೆಳಕು ಹೊತ್ತಿ ಬೆಳಗಲಿಲ್ಲ. ಅರಿವು ಮೂಡುವ ವೇಳೆಗೆ ಅವನ ಆಯುಷ್ಯವು ತೀರಿತ್ತು. ಆಯು ತೀರುವ ಮುನ್ನ ಬೆಳಕಿನೆಡೆಗೆ ಸಾಗಬೇಕು. ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021