ಉರಿವ ಬಿಸಿಲಿಂಗೆ ಧರೆ
ಯುರಿದೊಡೇಂ ನೀರಾವಿ
ತಂಪುಗೈವುದು ಬಿಡದೆ
ಇದೆ ಸೃಷ್ಠಿ ನಿಯಮ
ಬಾಳ ತಾಪಕೆ ಸಿರಿಯು
ಆವಿಯಾಗಲೆ ಬೇಕು
ಸಿರಿ ಸೇರೆ ತಾಪ ಕಾಣ್
ಜಾಣಮೂರ್ಖ //
ಉರಿವ ಬಿಸಿಲಿಗೆ ನೀರು ಆವಿಯಾಗಿ ಮತ್ತೆ ಮಳೆ ಸುರಿದರೇನೇ ಭೂಮಿ ತಂಪಾಗುವುದು ತಾನೆ ? ಇದೇ ಜಗದ ನಿಯಮ. ಹಾಗೆಯೇ ಬದುಕಿನ ತಾಪಕ್ಕೆ ಈ ಸಿರಿಯೇ ಕಾರಣ. ಅದು ಕರಗಿ ಆವಿಯಾದರೇನೇ ಬದುಕು ತಂಪಾಗಿರುತ್ತದೆ. ಸಿರಿ ಕೂಡುತ್ತಲೇ ಇರಬೇಕು, ಕರಗಲೇ ಬಾರದು ಎಂಬ ಭಾವದಲ್ಲಿ ಕೂಡಿಡಲು ಹೊರಟರೆ ತಾಪವು ಅಧಿಕವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗುತ್ತೇವೆ. ಸೃಷ್ಠಿನಿಯಮಕ್ಕೆ , ಪ್ರಕೃತಿಗೆ ವಿರುದ್ಧವಾಗಿ ನಡೆಯಲಾದೀತೆ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021