ಹಸಿವೊಳಿಹ ಬಸಿರು ತಾ
ಕಸಿದುಣ್ಣುವುದು ದಿಟದಿ
ಹಸಿಯದಿರೆ ಮೊಸರಿನೊಳು
ಕಲ್ಲು ಕಾಣಯ್ಯ !
ಹಸಿದವನು ಅನ್ನದೊಳು
ದೇವನನು ಕಾಣುವನು
ಹಸಿಯದವಗಿಹುದು ಮಣ್
ಜಾಣಮೂರ್ಖ //
ಊಟಕ್ಕೆ ಹಸಿವು ಬೇಕು. ಹಸಿದವನು ಕಸಿದುಕೊಂಡಾದರೂ ಉಣ್ಣುತ್ತಾನೆ. ಹಸಿಯದವನಿಗೆ ಮೊಸರಿನಲ್ಲೂ ಕಲ್ಲೇ ಕಾಣಸಿಗುತ್ತದೆ. ನಿಜವಾಗಿ ಯಾರು ಹಸಿದಿರುವನೋ ಅವನು ಅನ್ನದಲ್ಲಿ ಭಗವಂತನನ್ನೇ ಕಾಣುತ್ತಾನೆ ! ಹೊಟ್ಟೆ ತುಂಬಿದವನು ಕಲ್ಲು ಮಣ್ಣನ್ನಲ್ಲದೆ ಇನ್ನೇನನ್ನು ಬೆದಕಲು ಸಾಧ್ಯ ! ಅಲ್ಲವೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021