ಪೂರ್ವದೊಳಗೊಡೆಯನಾರ್
ನಿನ್ನ ಹೊಲ ಮನೆಗೆಲ್ಲ ?
ನಾಳೆ ಯಾರದೊ ಗೊತ್ತೆ ?
ಅರಿತವರು ಯಾರು ?
ಅಂತೆ ಸುಖ ದುಃಖಗಳು
ಕಾಲಚಕ್ರದಿ ಬಂಧಿ !
ಅರಿವಿನಾ ಕಣ್ಣ ತೆರೆ
ಜಾಣಮೂರ್ಖ //
ಈಗ ಸ್ವಲ್ಪ ಯೋಚಿಸೋಣ. ನಮ್ಮ ತೋಟ , ಹೊಲ , ಮನೆ , ಆಸ್ತಿಪಾಸ್ತಿಗಳೆಲ್ಲವೂ ಈ ಭೂಮಿ ಹುಟ್ಟಿದಾಗಿನಿಂದಲೂ ಇವೆ. ಹಿಂದೆಲ್ಲಾ ಅವುಗಳಿಗೆ ಯಾರು ಒಡೆಯರಾಗಿದ್ದರು ? ಇಂದು ನಾವು ಒಡೆಯರಿರಬಹುದು ! ನಮ್ಮ ನಂತರ ! ನಮ್ಮ ಮಕ್ಕಳು ! ಮುಂದೆ ಯಾರು ? ಯಾರೋ ! ಅರಿತವರು ಯಾರು ? ಲಕ್ಷ ಲಕ್ಷ ವರ್ಷಗಳಿಂದಲೂ ಕಾಲ ಚಕ್ರವು ಸುತ್ತುತ್ತಲೇ ಇದೆ ! ಅಲ್ಲಿ ನಾವೆಲ್ಲರೂ ಬಂಧಿಗಳು. ಅಂತೆಯೇ ನಮ್ಮ ಸುಖ ಸಂತೋಷ, ಅಧಿಕಾರ, ದರ್ಪ ಮತ್ತೊಂದು ಎಲ್ಲ. ಇಂದು ಹಿತವಾಗಿರಬಹುದು ಮುಂದೆ ಅಹಿತ ! ಇಂದಿನ ಸುಖ ನಾಳಿನ ಅಸುಖ ! ಇಂದಿನ ದುಃಖವಳಿದು ಸಂತಸವೂ ಸಿಗಬಹುದು ! ಮತ್ತೆ ಅದು ಶಾಶ್ವತವಂತೂ ಅಲ್ಲ. ಆದರೆ ಭಗವಂತನೊಬ್ಬನೇ ಸತ್ಯ ನಿತ್ಯ ! ಮತ್ತಾವುದೂ ಚಿರವಲ್ಲ. ಅರಿವಿನ ಕಣ್ಣು ತೆರೆದು ನೋಡಿದಾಗ ಎಲ್ಲವೂ ಸ್ಪಷ್ಟ. ಆ ವಿವೇಕದ ಕಣ್ಣು ತೆರೆದು ನೋಡಬೇಕಷ್ಟೆ ! ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021