ನಾನಳಿದು ನೀನೆಂಬ
ಭಾವ ಮೂಡಲುಮಾಗ
ನೀನೆ ಬಲು ಜಾಣ ಕಾಣ್
ಧ್ಯಾನ ಬೇರೇಕೆ !?
ಮರಣ ಕಾಲದಿ ಸಿರಿಯು
ಪಾರು ಮಾಳ್ಪುದೆ ಮರುಳೆ
ಬರಿ ಬೆಮೆಯೊಳೇಕಳುವೆ
ಜಾಣಮೂರ್ಖ //
ನಮ್ಮಲ್ಲಿರುವ ನಾನತ್ವವಳಿದು ನೀನೇ ಎಂಬ ಭಾವವು ಮೂಡಬೇಕು. ಆಗ ನೀನು ನಿಜವಾದ ಜಾಣ. ಭವಭಂಧನಗಳಿಂದ ಪಾರು ಮಾಡುವ ಭಗವಂತನನ್ನು ನಂಬಬೇಕೇ ಹೊರತು ಬೇರೇನನ್ನೂ ಅಲ್ಲ ! ಸಿರಿ ಸಂಪದ , ಆಸ್ತಿ ಪಾಸ್ತಿ ಏನೇ ಇದ್ದರೂ ಮರಣಕಾಲದಲ್ಲಿ ಯಾವುವೂ ನಮ್ಮ ರಕ್ಷಣೆಗೆ ಬಾರವು. ನಾವು ಮಾಡಿದ ಧರ್ಮಕಾರ್ಯಗಳಷ್ಟೇ ನಮ್ಮ ಬೆನ್ನೆಲುಬಾಗಿ ನಿಲ್ಲುತ್ತವೆ. ಇದರಲ್ಲಿ ಸಂದೇಹವಿಲ್ಲ. ಮಹಾನ್ ಮಹಾನ್ ಪಂಡಿತರುಗಳನ್ನೇ ವಾದದಲ್ಲಿ ಸೋಲಿಸಿದ ಆದಿ ಶಂಕರರೇ -“ನಹಿ ನಹಿ ರಕ್ಷತಿ ಡುಕ್ರುಂಕರಣೇ ! ಭಜಗೋವಿಂದಂ ! ಎಂದು ಭಕ್ತಿಯ ಪಾರಮ್ಯವನ್ನು ಸಾರಿ ಹೇಳಿದ್ದಾರೆ. ಹೀಗಿರುವಾಗ ಬರಿಯ ಭ್ರಮೆಯಲ್ಲಿ ತೊಳಲಾಡುವುದನ್ನು ಬಿಟ್ಟು ಭಗವಂತನನ್ನು ಭಜಿಸೋಣವೇ !?
ಸಹೃದಯ ಓದುಗರೆಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು . ಜಗನ್ಮಾತೆಯು ಅಂತೆಯೇ ವರಸಿದ್ಧಿ ವಿನಾಯಕನು ತಾವು ನೆನೆಸಿದುದನ್ನು ನನಸಾಗಿಸಲೆಂಬ ಶುಭ ಹಾರೈಕೆಯೊಂದಿಗೆ
✍️ಮುರಳೀಧರ ಹೆಚ್.ಆರ್.
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021