ಕಾಣದುದ ಕಾಣ್ವುದಿದೆ
ಕೇಳದುದ ಕೇಳ್ವುದಿದೆ
ಸವಿವ ಸವಿ ಬೇರೆಯಿದೆ
ಮನವನಣಿಗೊಳಿಸು !
ಜಗದವಾಸನೆಗಳಂ
ತೊರೆ ಸ್ಪರ್ಷಿಸೇಳ್ ದಿ
ವ್ಯ ದೈವತ್ವಮಿದೆ ಕಾಣ್
ಜಾಣಮೂರ್ಖ//
ಓ, ಗೆಳೆಯಾ ಈ ಜಗತ್ತಿನಲ್ಲಿ ಜನ್ಮವೆತ್ತಿ ನಾವು ಕಾಣಬೇಕಾದುದನ್ನು ಕಾಣಬೇಕಿದೆ. ಕೇಳಬೇಕಾದುದನ್ನು ಕೇಳಬೇಕಿದೆ. ಸವಿಯಬೇಕಾದುದನ್ನು ಸವಿಯಬೇಕಿದೆ. ಆದರೆ ಇದೆಕ್ಕೆಲ್ಲಾ ಈ ಜಗದ ಲೌಕಿಕದ ವಾಸನೆಗಳು ಅಡ್ಡಿ ಪಡಿಸಿ ದಿವ್ಯವಾದ ದೈವಾನುಸಂಧಾನಕ್ಕೆ ಅಡ್ಡಿಯಾಗಿವೆ. ಈ ಪಂಚೇಂದ್ರಿಯಗಳು ನಮಗೆ ಕೊಡಲ್ಪಟ್ಟಿರುವುದು ಕೇವಲ ಭೌತಿಕ ಪ್ರಪಂಚದ ಸುಖವನ್ನು ಅನುಭವಿಸಿ ಸಾಗುವುದಕ್ಕಲ್ಲ. ಇದರ ಮಧ್ಯದಲ್ಲಿದ್ದುಕ್ಕೊಂಡೇ ಇದಕ್ಕೆ ಅತೀತವಾದುದನ್ನು ಕಾಣುವುದಕ್ಕೆ ! ಅದಕ್ಕೆ ನಾವು ಸ್ವಲ್ಪ ಜಾಗೃತರಾಗಿ ಚಿಂತಿಸಿ ಕಾಣದುದನ್ನು ಕಾಣಬೇಕು ! ಕೇಳದುದನ್ನು ಕೇಳಬೇಕು ! ಸವಿಯದುದನ್ನು ಸವಿಯಬೇಕು ! ಲೌಕಿಕ ಭೋಗಭಾಗ್ಯಂಗಳಿಂದ ದೂರವಿದ್ದು ಭಗವದನುಸಂಧಾನ ಮಾಡಬೇಕು. ಆಗ ನಿಜವಾದ ಅರ್ಥದಲ್ಲಿ ಬದುಕು ಸಾರ್ಥಕ ಎನಿಸುತ್ತದೆ. ಇದನ್ನು ಭಗವಂತನೂ ಮೆಚ್ಚುತ್ತಾನೆ. ಮೆಚ್ಚಲೇಬೇಕು ! ಅಲ್ಲವೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021