ಮುಟ್ಟದಿರು ವಿಷಯಗಳ
ಕಟ್ಟಿಕೊಳ್ಳದೆ ಸುಟ್ಟು
ಬಿಟ್ಟು ಬಯಲಾಗು ಬಾ
ಕೆಟ್ಟೀಯೆ ಜೋಕೆ !
ಮತ್ತೆ ನೆನೆಯದಿರದನು
ಹತ್ತಿರಾದಾವು ಬಿಡು
ನೆನಹೆ ನೇಣಾದೀತೊ
ಜಾಣಮೂರ್ಖ //
ವಿಷಯಗಳ ಜೊತೆ ಬದುಕಲೇಬೇಕು ! ಎಂತಹಾ ಅನಿವಾರ್ಯತೆ !? ಆದರೆ ಸಾಧ್ಯವಾದಷ್ಟೂ ಅವುಗಳಿಂದ ದೂರವಿರೋಣ. ಅವುಗಳನ್ನು ಸುಟ್ಟು ಬಯಲಲ್ಲಿ ಬಯಲಾಗಬೇಕು. ಕೆಟ್ಟು ಭವಬಂಧನಗಳಲ್ಲಿ ಬಂಧಿಯಾಗಿ ತೊಳಲಾಡುವುದಕ್ಕಿಂತ ಮನದಲ್ಲೇ ಅವುಗಳಿಗೊಂದು ಅಂತ್ಯ ಹಾಡೋಣ. ಸರಿ ! ಕಡೆಗಾಣಿಸಿದ ಮೇಲೆ ಮತ್ತೆ ಕನಸಿನಲ್ಲೂ ನೆನೆಯಬೇಡಯ್ಯ . ಅವೇನು ಸ್ವಲ್ಪ ಇಂಬು ಸಿಕ್ಕರೆ ಸಾಕು ಮತ್ತೆ ಹತ್ತಿರಾಗಿಬಿಡುತ್ತವೆ ಜೋಕೆ ! ನಮ್ಮ ನೆನಹೇ ನೇಣಾಗಿಬಿಟ್ಟೀತು ! ಇದೆಲ್ಲಾ ಎಷ್ಟು ಸುಂದರವೋ ಅಷ್ಟೇ ಅಪಾಯ ! ಎಚ್ಚರಾ ! ಎಚ್ಚರಾ ! ಅದಕ್ಕೇ ಬದುಕು ಕಮಲ ಪತ್ರದಂತೆ ಇರಬೇಕು. ಅದು ನೀರಿಗೆ ಅಂಟಿಯೂ ಅಂಟದಂತಿರುವುದಲ್ಲವೇ ! ಹಾಗೇ ನಾವೂ ಸಹ ಈ ವಿಷಯಾದಿಗಳಿಗೆ ಅಂಟಿಯೂ ಅಂಟದಂತೆ ಇದ್ದುಬಿಡಬೇಕು. ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021