ವಿಷಯಗಳ ಭಾರದಿಂ
ಜರ್ಜರಿತಮೀ ಬದುಕು
ಭಾರವಿಳಿಯಲು ಬಾಳ
ಪಯಣ ಬಲು ಸುಗಮ !
ಮನೆಯ ದೀಪಕೆ ಮುತ್ತ
ನಿಕ್ಕುವರೆ ಮುದದಿಂದ ?
ಹೊರೆಯಿಳಿಸು ದಾರಿಯಿದೆ
ಜಾಣಮೂರ್ಖ //
ಸವಿಯ ಬೇಕಾದ ಬದುಕಿನಲ್ಲಿ ವಿಷಯಾಂಧಕಾರವು ತುಂಬಿದೆ. ಎತ್ತ ನೋಡಿದರೂ ಕತ್ತಲೇ ! ಮನದ ಕತ್ತಲು! ಬದುಕು ದಾರಿಕಾಣದೆ ಜರ್ಜರಿತವಾಗಿದೆ. ಒಂದು ಕ್ಷಣ ಮನದ ಭಾರವನ್ನಿಳಿಸಿ ಹಗುರವಾಗಿಬಿಡಯ್ಯಾ ! ಸರಳವಾಗಿಸಿ ಬಿಡು ಬದುಕ. ಬಾಳ ದಾರಿ ಬಹು ಸುಲಭವಾಗ ! ಮನೆ ದೀಪ. ನಮಗೆಲ್ಲಾ ಬೆಳಕ ನೀಡುತ್ತದೆಯೆಂದು ಯಾರಾದರೂ ಮುತ್ತನಿಡುವರೇನದಕೆ ? ಈ ಬದುಕೂ ಹಾಗೆ. ಅಂಟಿಯೂ ಅಂಟದಂತೆ ಇದ್ದು ಆನಂದಿಸಿ ಹೋಗಬೇಕು. ಯಾವುದಕ್ಕೂ ಅಂಟಿಕೊಳ್ಳಬಾರದು. ವಿಷಯಗಳ ಹೊರೆಯನ್ನು ಹಂತಹಂತವಾಗಿ ಕಳೆದು ಮುನ್ನಡೆದಾಗ ದಾರಿ ತಾನಾಗೇ ಸಿಗುತ್ತದೆ. ಇದರಲ್ಲಿ ಸಂಶಯವಿಲ್ಲ.
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021