ವನರಾಜ ಮೌನದಿಂ
ಘನನಿದಿರೆ ಗೈಯ್ಯುತಿರೆ
ಮಿಕ್ಕ ಮಿಗಗಳ ವಿಕಟ
ತಂತ್ರ ಮೆರೆಯುತಿರೆ !
ಸಿಂಗಮೆಚ್ಚರಗೊಳಲು
ಭಂಗಬಿದ್ದೋಡುವವು
ಲೆಕ್ಕಮೇನದಕೆ ಪೇಳ್
ಜಾಣಮೂರ್ಖ //
ಕಾಡಿನಲ್ಲಿ ವನರಾಜ ಸಿಂಹವು ಗಾಢವಾದ ನಿದಿರೆಯಲ್ಲಿದೆ ಎಂದರೆ ಇತರ ಮೃಗಗಳು ಸ್ವತಂತ್ರವಾಗಿಯೂ , ಸ್ವೇಚ್ಛೆಯಿಂದಲೂ ಮೆರೆಯುತ್ತವೆ. ಅದೇ ಸಿಂಹಕ್ಕೆ ಎಚ್ಚರವಾದೊಡನೆ ಸತ್ತೆನೋ ಕೆಟ್ಟನೋ ಎಂದು ಓಡುತ್ತವೆ. ಹಾಗೆಯೇ ನಮ್ಮ ಬದುಕಿನಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಾಡುತ್ತಿವೆ ಎಂದರೆ ನಮ್ಮ ಮನವೆಂಬ ಸುಂದರ ವನದ ವನರಾಜ ಸಿಂಹವು ಮಲಗಿದೆಯೆಂದೇ ಅರ್ಥ. ಅದನ್ನು ಸ್ವಲ್ಪ ಎಚ್ಚರಗೊಳಿಸಿದರೆ ಸಾಕು. ಬದುಕಿನ ಕಷ್ಟಗಳೆಲ್ಲಾ ಕ್ಷುದ್ರ ಮೃಗಗಳಂತೆ ಹೇಳದೇ ಕೇಳದೇ ಓಡುತ್ತವೆ. ಅದನ್ನು ಎಚ್ಚರಿಸುವ ಕಾರ್ಯವಾಗಬೇಕಿದೆ ಅಷ್ಟೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021