ಲೋಗರೆಲ್ಲರು ತನ್ನ
ಮಾತನಾಲಿಪರೆಂದು
ಅವರ ಸೊಲ್ಗೇಳದೆಯೆ
ಮರೆದರೇನಾಯ್ತು ?
ಎಳೆಯ ನಿಂಬೆಯ ಕಾಯಿ
ಪಕ್ವತೆಯ ಪಾಠವನು
ಪೇಳೆ ಪಣ್ ನಗುವುದೈ !
ಜಾಣಮೂರ್ಖ //
ತಾನು ಹೇಳಿದ ಮಾತನ್ನು ಎಲ್ಲರೂ ಕೇಳುತ್ತಾರೆ ಎಂದು ಅಧಿಕಾರದ, ಅರ್ಥದ ಮದದಲ್ಲಿ ನಾವು ಏನೇನೋ ಬಡಬಡಿಸಿದರೆ ಯಾರು ಕೇಳುತ್ತಾರೆ ಈ ಪ್ರಪಂಚದಲ್ಲಿ ಈಗ !? ಅವರ ಮಾತನ್ನು ವ್ಯವಧಾನದಿಂದ ಆಲಿಸಬೇಕಲ್ಲವೇ ? ಎಲ್ಲರಿಗೂ ಒಂದೊಂದು ಅಭೂತಪೂರ್ವವಾದ ವ್ಯಕ್ತಿತ್ವವಿರುತ್ತದೆ. ಅದನ್ನು ಅರಿವ ಗುಣವನ್ನು ಬೆಳೆಸಿಕೊಳ್ಳಬೇಕಷ್ಟೆ. ಇಲ್ಲದಿದ್ದರೆ ನಮ್ಮ ಅಧಿಕಾರ , ಅರ್ಥ , ದರ್ಪ ಏನೇ ಇದ್ದರೂ ವ್ಯರ್ಥವೇ. ಇದು ಹೇಗಾಗುತ್ತದೆ ಎಂದರೆ ಎಳೆಯ ನಿಂಬೆಯ ಕಾಯೊಂದು ಪಕ್ವತೆಯ ಪಾಠವನ್ನು ಹಣ್ಣಿಗೆ ಹೇಳಿದಷ್ಟು ವಿಪರ್ಯಾಸವೆನಿಸುತ್ತದೆ. ಇದನ್ನು ಕೇಳಿ ಹಣ್ಣು ನಗುತ್ತದೆ ಅಷ್ಟೆ. ಹಣ್ಣಿನ ಬೆಲೆ ಹಣ್ಣಿಗೆ ! ಎಳೆ ನಿಂಬೆ ಕಾಯಿಯ ಬೆಲೆ ಅದಕ್ಕೆ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021