ಕೊಟ್ಟು ನೋಡುವನು ತಾ
ಕೊಡದೆಯೂ ನೋಡುವನು
ಕೊಟ್ಟರೂ ಕೊಡದಂತೆ
ಇಟ್ಟುಬಿಡಬಹುದು !
ಕೊಟ್ಟೊಡೇಂ ಕೊಡದೊಡೇ
ನಿಟ್ಟಂತೆ ಇದ್ದುಬಿಡು
ಕೆಟ್ಟೆನೆಂದೆನಬೇಡ
ಜಾಣಮೂರ್ಖ //
ಭಗವಂತನು ಮಾನವನ ವಿವಿಧ ಅಗತ್ಯಗಳನ್ನು ಕೊಟ್ಟು ನೋಡುತ್ತಾನೆ. ಹಾಗೆಯೇ ಕೊಡದೆಯೂ ನೋಡುತ್ತಾನೆ. ಕೊಟ್ಟರೂ ಕೊಡದಂತೆ ಇಟ್ಟು ಬಿಡುತ್ತಾನೆ. ಕೆಲವರನ್ನು ನೋಡಿ ಎಲ್ಲ ಇದ್ದರೂ ಏನೂ ಇಲ್ಲದಂತೆಯೇ ಬದುಕುತ್ತಾರೆ. ಅಲ್ಲವೇ !? ಅದಕ್ಕೆ ನಮ್ಮ ಬದುಕು ಹೇಗಿರಬೇಕೆಂದರೆ ದೈವವು ಕೊಡಲಿ , ಕೊಡದಿರಲಿ ಹೇಗಾದರೂ ಇರಲಿ ಇಟ್ಟಂತೆ ಇದ್ದುಬಿಡಬೇಕು. ಅಯ್ಯೋ ನಾ ಕೆಟ್ಟೆನೆನದಂತೆ ಬದುಕಬೇಕು. ಭಗವಂತನ ಧ್ಯಾನವನ್ನು ಮಾತ್ರ ಬಿಡಬಾರದು. ಒಂದಂತೂ ಸತ್ಯ . ಬರುವುದಿದ್ದರೆ ಬಂದೇ ಬರುತ್ತದೆ. ಬಾರದಿರುವುದಕ್ಕೆ ಚಿಂತಿಸಿ ಫಲವಾದರೂ ಏನು ! ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021