ಬದುಕೆಲ್ಲರಿಗು ಒಂದೆ
ಬೆದಕದರ ತತ್ತ್ವವನು
ಸುಮ್ಮನಿರದಿರು ಕೆಳೆಯ
ಅರಿಯದರ ಮರ್ಮ !
ಒಳಿತಾದರಾಗಲೈ
ಕೆಡುಕಾದರೊಳಿತ ಗೈ
ಅದುವೆ ಜೀವನ ಮರ್ಮ
ಜಾಣಮೂರ್ಖ //
ಈ ಬದುಕು ನನಗೊಂದು ರೀತಿ, ನಿಮಗೊಂದು ರೀತಿ ಇರದು. ಕಷ್ಟಗಳಿಂದ ಹೊರತಾದವರು ಯಾರೂ ಇಲ್ಲ. ಕಷ್ಟದ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಅದು ನಾವು ಮಾಡಿಕೊಳ್ಳುವುದಷ್ಟೆ ಅಲ್ಲವೇ ? ಎಚ್ಚರ ತಪ್ಪಬಾರದಷ್ಟೆ. ನಾವು ಸುಮ್ಮನಿರದೇ ಬದುಕಿನ ತತ್ತ್ವವನ್ನು ಬೆದಕುತ್ತಲೇ ಇರಬೇಕು. ಅದರ ಮರ್ಮವನ್ನು ಅರಿಯಬೇಕು. ಅರ್ಥಾತ್ ಪ್ರಯೋಗಶೀಲರಾಗಿರಬೇಕು. ಇದರಿಂದ ಒಳ್ಳೆಯದೇ ಆಗುತ್ತದೆ. ಒಂದುವೇಳೆ ಕೆಡುಕಾಯಿತು ಎಂದಿಟ್ಟುಕೊಳ್ಳೋಣ. ಅದನ್ನು ಸರಿಪಡಿಸೋಣ. ಮನೋಶಕ್ತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಇದರಿಂದ ಜೀವನದ ಅನುಭವಾಮೃತವು ನಮ್ಮದಾಗುತ್ತದೆ. ಜಗತ್ತಿಗೆ ಆ ನವನೀತವನ್ನು ಹಂಚೋಣ. ನಿಮಗಿದು ಗೊತ್ತೇ ಗೆಳೆಯರೇ ಅದು ಹಂಚಿದಷ್ಟೂ ಹೆಚ್ಚುತ್ತಲೇ ಹೋಗುತ್ತದೆ. ತೆಗೆದುಂಬುವರಿಗೆ ಅದೊಂದು ಅಕ್ಷಯಪಾತ್ರೆ ಇದ್ದಹಾಗೆ. ಹೇಗಿದೆ ನೋಡಿ ಬದುಕಿನ ಮರ್ಮ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021