ಆರು ನೀನೆನುವುದಕೆ
ಕೊಡುತ ಸಾರುತ್ತರವ
ಬಡವನೋ ಬಲ್ಲಿದನೊ
ಮಗನೊ ಮೊಮ್ಮಗನೊ
ಮಂತ್ರಿಯೋ ತಂತ್ರಿಯೋ
ಏನಿರಲಿ ಬಾ ಹೊರಗೆ
ಅದುವೆ ಸತ್ಯಾನಂದ
ಜಾಣಮೂರ್ಖ //
ಈ ಕೆಲಸವನ್ನು ಪ್ರಯೋಗಿಕವಾಗಿ ನೀವೂ ಮಾಡಿ , ಈಗಲೇ ಮಾಡಿ. ಏನೂ ತೊಂದರೆಯಿಲ್ಲ ! ನಿಜವಾಗಿ ನೀವು ಯಾರೆಂಬ ಸತ್ಯ ತಿಳಿಯುತ್ತದೆ. ಏನೆಂದರೆ ಒಂದು ಪ್ರಶ್ನೆ ಹಾಕಿಕೊಳ್ಳಿ. ಅದೇನೆಂದರೆ ನಾನು ಯಾರು ? ಎನ್ನುವುದಷ್ಟೆ. ಉತ್ತರ ಕೊಡುತ್ತಾ ಸಾಗಿ. ನಾನು ಮುರಳೀಧರ( ನೀವು ನಿಮ್ಮ ಹೆಸರು ಹೇಳಿಕೊಳ್ಳಿ ) , ನಾನು ಉಪಾಧ್ಯಾಯ , ನಾನು ಇಂತಹವರ ಮಗ , ಇಂತಹವರ ಮೊಮ್ಮಗ , ನಾನು ಬಡವ , ನಾನು ಶ್ರೀಮಂತ , ನಾನು ಮಂತ್ರಿ , ನಾನು ತಂತ್ರಿ , ನಾನು……… ನೀವು ಏನೇನೋ ಎಲ್ಲವನ್ನೂ ಹೇಳುತ್ತಾ ಹೋಗಿ ! ಒಳ್ಳೆಯದು ಕೆಟ್ಟದ್ದು ಎಲ್ಲಾ ! ಏನೊಂದನ್ನೂ ಉಳಿಸಬೇಡಿ. ಕೊನೆಯಲ್ಲಿ ಏನುಳಿಯುವುದೋ ನೋಡಿ ! ಅದೇ ನಿಜವಾಗಿ ನೀವು. ಲೋಕದ ಸಂಬಂಧಗಳನ್ನೆಲ್ಲಾ ಕಳಚಿ ಹೊರಬರುತ್ತೇವಲ್ಲಾ ! ಅದೆಂತಹಾ ಸ್ಥಿತಿ ಗೊತ್ತೇ ! ಆ ಆನಂದವನ್ನು ನಾನು ಮಾತುಗಳಲ್ಲಿ ಹೇಳಲಾರೆ. ಅದು ಆನಂದದ ಒಂದು ಅವ್ಯಕ್ತ ಸ್ಥಿತಿ. ಅದೇ ನಿತ್ಯ ಸತ್ಯ ! ಸತ್ಯಾನಂದ ! ಜಗನ್ನಾಟಕದಲ್ಲಿ ಎಲ್ಲವನ್ನೂ ಮೀರಿನಿಂತ ಸ್ಥಿತಿ ! ಅದೊಂದು ದಿವ್ಯಾನುಭವ ! ಈ ಸ್ಥಿತಿಯನ್ನು ಸಾಕ್ಷಾತ್ಕರಿಸಿಕೊಂಡವರು ನಿಜವಾಗಿ ಬದುಕಿನ ಸತ್ಯವನ್ನು ಅರಿಯುತ್ತಾರೆ. ಅನುಭವಿಸಿದವರಿಗೇ ಗೊತ್ತು. ಬಲ್ಲವನೇ ಬಲ್ಲ ಬೆಲ್ಲದಾ ಸವಿಯ ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021