ಎಂತು ಬರಿದಾಗುವುದು
ತಾಯಿ ಶಾರದೆಯೊಡಲು ?
ಮಡಿಲು ಕರುಣೆಯ ಕಡಲು !
ಕೆರಳೆ ತಾಯ್ ಸಿಡಿಲು !
ಧ್ಯಾನ ಮುದ್ರೆಯ ಕಳೆದು
ಅರಿವ ಕಿರಣವ ಬೀರೆ
ವೈರಾಣು ಹೈರಾಣ
ಜಾಣಮೂರ್ಖ //
ವಿದ್ಯಾಧಿದೇವತೆ ತಾಯಿ ಶಾರದೆಯ ಒಡಲು ಅರಿವಿನ ಕಡಲು. ಅದು ಬರಿದಾಗಲು ಸಾಧ್ಯವೇ ? ಬರಿದಾಗುವುದೆಂಬುದು ಕೇವಲ ಭ್ರಮೆ ಮಾತ್ರವಲ್ಲವೇ ! ಅವಳ ಮಡಿಲು ಕರುಣೆಯ ಕಡಲು. ತಾಯಿ ಕೆರಳಲು ಉಳಿವುಂಟೆ !? ಧ್ಯಾನಮುದ್ರೆಯೊಳಿರುವಳೆಂದ ಮಾತ್ರಕ್ಕೆ ಕೊರೋನದಂತಹಾ ದುಷ್ಟ ವೈರಾಣುಗಳ ಆಟ ನಡೆಯದು. ಅದು ತತ್ಕಾಲಕ್ಕಷ್ಟೆ. ದೈವಶಕ್ತಿಯ ಎದಿರು ದುಷ್ಟಶಕ್ತಿ ನಿಲ್ಲಲು ಸಾಧ್ಯವೇ !? ಓ ,ಗೆಳೆಯಾ ! ಅವಳೊಮ್ಮೆ ತನ್ನ ಧ್ಯಾನಮುದ್ರೆಯ ಕಳೆಯಲಿ. ವೈದ್ಯಜ್ಞಾನ ಸ್ಫೋಟವಾಗಿ ಇಂತಹಾ ಕೋಟಿ ಕೋಟಿ ವೈರಾಣುಗಳು ಆವಿರ್ಭವಿಸಿ ಬಂದರೂ ಹೈರಾಣೆದ್ದು ಹೋಗುತ್ತವೆ. ಭೌತಿಕವಾಗಿ ತರಗತಿಯ ಕೋಣೆಗಳು ಬರಿದಾದರೇನಂತೆ ಗುರುಗಳ ಮುಖೇನವಾಗಿ ಅರಿವಿನ ಕಿರಣಗಳು ಪಸರಿಸಿ ಇಡೀ ಸೃಷ್ಠಿಯನ್ನೇ ಪುನೀತಗೊಳಿಸುತ್ತಿವೆ. ದುಷ್ಟಶಕ್ತಿಯ ಪ್ರಾಬಲ್ಯ ಇಷ್ಟರಲ್ಲೇ ಅಂತ್ಯವಾಗುತ್ತದೆ. ತೀರ ಉದ್ದವಾದದ್ದು ಬಗ್ಗಲೇಬೇಕು. ಅಮೃತ ಸದೃಶ ವಾತಾವರಣ ಮೂಡಲೇಬೇಕು. ಇದೇ ಸತ್ಯವು. ಅಲ್ಲವೇ ಗೆಳೆಯರೆ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021