ಆನೆಗಾನೆಯ ಬಲವು
ಆಡಿಗಾಡಿನ ಬಲವು
ಆನೆಯನು ಕಂಡಾಡು
ಕರುಬಲೇನಾಯ್ತು ?
ಘೀಳ್ಗಿದಿರೆ ಮೇಕಾರ ?
ಆಡ ಪಿಡಿವನೆ ಕರಿಗ ?
ನವರ ಬಲವವರಿಂಗೆ
ಜಾಣಮೂರ್ಖ //
ಈ ಸೃಷ್ಠಿಯಲ್ಲಿ ಅವರವರ ಶಕ್ತಿ ಸಾಮರ್ಥ್ಯಗಳು ಅವರವರದ್ದು. ಆನೆಯ ಶಕ್ತಿ ಆನೆಯದ್ದಾದರೆ ಆಡಿನ ಶಕ್ತಿ ಆಡಿನದ್ದು. ಆನೆಯನ್ನು ಕಂಡು ಆಡು ಅಸೂಯೆ ಪಟ್ಟರೆ ಏನೂ ಪ್ರಯೋಜನವಿಲ್ಲ. ಆದರೆ ತನ್ನ ಸಾಮರ್ಥ್ಯವನ್ನು ನೆನೆದು ಸಂತೋಷದಿಂದ ಬದುಕಬೇಕು. ಮೇಕೆಯ ಮೇಕಾರವು ಆನೆಯ ಘೀಳಿಡುವಿಕೆಗೆ ಸಾಟಿಯೇ ? ಎಂದಿಗೂ ಇಲ್ಲ. ಅಂತೆಯೇ ಆನೆಯು ಆಡಿನ ಸಮಕ್ಕೆ ಓಡಿ ಅದನ್ನು ಹಿಡಿಯಲು ಸಾಧ್ಯವೇ ? ಅದರ ಸಾಮರ್ಥ್ಯ ಅದರದ್ದು ಇದರ ಸಾಮರ್ಥ್ಯ ಇದರದ್ದು. ಅವರವರ ಶಕ್ತಿ ಸಾಮರ್ಥ್ಯಗಳು , ಕೌಶಲ್ಯಗಳು ಅವರವರದ್ದು. ಇದು ಸೃಷ್ಠಿ ವೈಚಿತ್ರ್ಯ ! ಇಲ್ಲಿ ಕರುಬುವ ಮಾತೇ ಇಲ್ಲ. ಅಲ್ಲವೇ ! ಹಾಗೆ ನೋಡಿದರೆ ಓಟದಲ್ಲಿ ಆಮೆಯು ಮೊಲವನ್ನು ಸೋಲಿಸಿದ ಕಥೆ ಯಾರಿಗೆ ಗೊತ್ತಿಲ್ಲ !? ಇಲ್ಲಿ ಯಾರೂ ಹೆಚ್ಚಲ್ಲ. ಯಾರೂ ಕಡಿಮೆಯೂ ಅಲ್ಲ. ಅಲ್ಲವೇ ಸ್ನೇಹಿತರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021