ಇಂತಿಹುದು ಅಂತಿಹುದು
ಎಂತಿಹುದೊ ಭವಿತವ್ಯ
ವೆನುವ ಭಯಬಿಡು ಮನವೆ
ಇರಲಿ ಬಿಡು ಅಂತೆ !
ನಿಯತಿ ನಿಶ್ಚಿತವಿರಲು
ಕಲ್ಪಿತವೆ ಭೀಕರವು
ಒಣತರ್ಕ ಒಗೆ ಮೊದಲು
ಜಾಣಮೂರ್ಖ//
ಭವಿಷ್ಯವು ಹೀಗಿರಬಹುದೇ ? ಹಾಗಿರಬಹುದೇ ? ಹೇಗಿರಬಹುದೆಂಬ ಭಯದ ಕಲ್ಪನೆಯಲ್ಲೇ ನಾವಿಂದು ಬದುಕು ಸಾಗಿಸುತ್ತಿದ್ದೇವೆ. ವಿಧಿಲಿಖಿತದಂತೆ ಏನು ನಡೆಯಬೇಕೋ ಅದು ನಡೆಯುತ್ತದೆ.ಯಾರಿಂದಲೂ ತಪ್ಪಿಸಲಂತೂ ಸಾಧ್ಯವಿಲ್ಲ. ಆದರೆ ಏನು ನಡೆಯಬೇಕೋ ಅದಕ್ಕಿಂತಲೂ ನಮ್ಮ ಕಲ್ಪನೆಯೇ ಹೆಚ್ಚು ಭಯಾನಕವಾಗಿರುತ್ತದೆ. ಅದೇ ಹೆಚ್ಚು ಭಯ, ಉದ್ವೇಗಗಳಿಗೆ ಕಾರಣವಾಗುತ್ತದೆ. ಅಂತಹಾ ಒಣತರ್ಕಗಳನ್ನು ಗಾಳಿಗೆ ತೂರಿಬಿಡಯ್ಯ ಗೆಳೆಯ. ನಿನ್ನ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡು. ಅದು ನಿನ್ನ ಅಧಿಕಾರ. ಕರ್ತವ್ಯ ಮಾಡಿ ನಿಶ್ಚಿಂತನಾಗಿರು. ಫಲಾಫಲಗಳ ನಿರ್ಧಾರ ನಿನ್ನದಲ್ಲ. ಅದು ಭಗವಂತನಿಗೆ ಬಿಟ್ಟದ್ದು. ಇದನ್ನೇ ಭಗವಾನ್ ಶ್ರೀಕೃಷ್ಣನು ಗೀತೆಯಲ್ಲಿ ಹೇಳಿರುವುದು. ಇದರಿಂದ ಒಣತರ್ಕ ಬಿಟ್ಟು ಬಂಧನಗಳಿಂದ ಮುಕ್ತರಾಗಿ ಸಂತೋಷದಿಂದ ಬದುಕುವ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021