ಕೊಡುವನೈ ದೇವ ತಾ
ನೆಲ್ಲರಿಂಗೆಲ್ಲವನು !
ಕೀಟಾದಿ ಪಶುಪಕ್ಷಿ
ಬದುಕಿಲ್ಲವೇನು !?
ತಂದಿಕ್ಕುವನೆ ಗವಿಗೆ
ಗಹ್ವರಕೆ ಗೂಡಿಗೆಲೊ !
ಕಟ್ಟಿಕೊಳ್ಳವೆ ಬದುಕ
ಜಾಣಮೂರ್ಖ //
ಭಗವಂತನು ಎಲ್ಲರಿಗೂ ಎಲ್ಲವನ್ನೂ ಕೊಟ್ಟಿರುತ್ತಾನೆ. ಅವರವರ ಪುಣ್ಯಕ್ಕೆ ತಕ್ಕಂತೆ ಎಲ್ಲವೂ ಸಿಕ್ಕಿರುತ್ತದೆ ಬಿಡಿ. ಆದರೆ ನಾವೇ ಅಗತ್ಯ ಮೀರಿ ಆಸೆಪಟ್ಟು ದುಃಖಕ್ಕೀಡಾಗುತ್ತೇವೆ ಅಷ್ಟೆ. ಪಶು ಪಕ್ಷಿ ಕ್ರಿಮಿ ಕೀಟಾದಿಗಳೂ ಬದುಕುತ್ತಿವೆ ಅಲ್ಲವೇ ? ಅಗತ್ಯ ವಸ್ತುಗಳನ್ನು ದೇವರೇನು ಅವು ವಾಸಿಸುವ ಗೂಡಿಗೋ, ಕಾಡಿಗೋ , ಗವಿಗೋ ತಂದಿಡುವನೇನು ? ಅವೂ ಕೂಡ ಸ್ವಪ್ರಯತ್ನದಿಂದ ಬದುಕುತ್ತಿವೆ ತಾನೆ ? ನಮಗೂ ಹಾಗೆಯೇ ಬೇಕಾದುದನ್ನು ನೀಡಿದ್ದಾನೆ. ಕೂಡಿಡುವ ಪ್ರವೃತ್ತಿಯನ್ನು ಬಿಟ್ಟು ಸೋಮಾರಿಗಳಾಗದೇ, ಅತಿಯಾಸೆ ಪಡದೇ ಅಗತ್ಯವಿರುವಷ್ಟನ್ನು ಮಾತ್ರ ಪಡೆದು ಸಂಭ್ರಮದಿಂದ ಬದುಕಿದರೆ ಕ್ಷಣಕ್ಷಣವೂ ಸಂತಸಮಯವಾದೀತು ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021