ಕಾಯವಳಿವುದು ಚಣದಿ
ನೆನೆ ಮನದಿ ಸಾಕದುವೆ
ಅಧ್ಯಾತ್ಮ ಗುರುವೇಕೆ ?
ಹೊತ್ತಗೆಗಳೇಕೆ ?
ಕುಲವೇಕೆ? ಛಲವೇಕೆ?
ಅರಿವೇಕೆ ? ಸಿರಿಯೇಕೆ ?
ಸಾರ ಸಾಕ್ಷಾತ್ಕಾರ
ಜಾಣಮೂರ್ಖ //
ಕ್ಷಣಮಾತ್ರದಲ್ಲಿ ಈ ಶರೀರವು ಅಳಿಯುತ್ತದೆ. ಹೀಗೇ ಕೊನೆಯಾಗುತ್ತದೆ ಎಂಬುದರ ಅರಿವು ಯಾರಿಗೂ ಇರುವುದಿಲ್ಲ. ಅಂತೂ ನಾವು ಸಾಯುತ್ತೇವೆ ಎಂಬುದನ್ನು ಒಮ್ಮೆ ಮನಸ್ಸಿಗೆ ತಂದುಕೊಳ್ಳಿ ಸಾಕು! ಮನಸ್ಸು , ದೇಹ ಎಲ್ಲ ಗಂಭೀರವಾಗಿಬಿಡುತ್ತದೆ.
ಯಾವ ಅಧ್ಯಾತ್ಮ ಗುರುವೂ ಬೇಡ. ಪುಸ್ತಕಗಳೂ ಬೇಡ. ಕುಲವಾಗಲಿ , ಮನಸ್ಸಿನ ಛಲವಾಗಲಿ, ಅರಿವಾಗಲಿ , ಐಶ್ವರ್ಯವಾಗಲಿ ಯಾವುದೂ ಬೇಡವೆನಿಸಿ ಬದುಕಿನ ಸಾರವೇ ಸಾಕ್ಷಾತ್ಕಾರಗೊಂಡಂತೆ , ಎಲ್ಲ ಜಂಜಾಟಗಳಿಂದ ಬಿಡುಗಡೆಗೊಂಡ ಒಂದು ತೆರನಾದ ನಿರ್ಲಿಪ್ತ ಭಾವವು ನೆಲೆಗೊಳ್ಳುತ್ತದೆ ! ಅಚ್ಚರಿಯೆಂದರೆ ಇದು ಕೆಲ ನಿಮಿಷಗಳಷ್ಟು ಕಾಲವೂ ಸ್ಥಾಯಿಯಾಗಿರುವುದಿಲ್ಲ. ಮತ್ತಾಗಲೇ ಇಹಕ್ಕೆ ಜಾರಿ ಬಿಡುತ್ತೇವೆ. ಮಾಯಾ ಪ್ರಪಂಚದಲ್ಲಿ ಸೇರಿಹೋಗುತ್ತೇವೆ. ಎಲ್ಲವೂ ಚಿರವೇನೋ ಎಂಬಂತೆ ಗುದ್ದಾಡುತ್ತೇವೆ. ಎಷ್ಟು ವಿಚಿತ್ರ ಅಲ್ಲವೇ ಸ್ನೇಹಿತರೇ !!?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021