ಬಾಳಬಂಡಿಗೆ ನೀನೆ
ಬಲ್ಮೆಯಾ ಚಾಲಕನು
ಅರಿವೆ ಕಡಿವಾಣವರಿ
ತಿಳುವಿನೊಳು ನಡೆಸು
ಚಣದೊಳೆಚ್ಚರ ತಪ್ಪ
ಲಲ್ಲೋಲ ಕಲ್ಲೋಲ
ವಿದುವೆ ಜಾಗೃತ ಮಂತ್ರ
ಜಾಣಮೂರ್ಖ //
ಬಾಳೊಂದು ಪಯಣ ! ಈ ಬಾಳ ಬಂಡಿಗೆ ನಾವೇ ಬಲ್ಮೆಯ ಚಾಲಕರು ! ಭಗವಂತನು ಕೊಟ್ಟ ಶ್ರೇಷ್ಠ ಜ್ಞಾನವೆಂಬುದೇ ಕಡಿವಾಣ! ಆ ಅರಿವಿನ ಬೆಳಕಿನಿಂದ ನಡೆಯಬೇಕು. ಕ್ಷಣಮಾತ್ರದ ಅಜಾಗರೂಕತೆಯು ಅಲ್ಲೋಲ ಕಲ್ಲೋಲವನ್ನೇ ಮಾಡಿಬಿಡಬಹುದು. ಎಚ್ಚರಿಕೆಯಿಂದ ಮುನ್ನಡೆಯಬೇಕು. ಯಾವುದೇ ಕಾರ್ಯದಲ್ಲಾಗಲಿ, ಯಾವುದೇ ಕ್ಷಣದಲ್ಲಾಗಲಿ ಎಚ್ಚರ ತಪ್ಪಬಾರದು. ನಮ್ಮನ್ನು ಎಚ್ಚರ ತಪ್ಪಿಸಲು ಈ ಮಾಯಾ ಪ್ರಪಂಚವು ಕಾಯುತ್ತಿರುತ್ತದೆ. ಕ್ಷಣಮಾತ್ರದ ಅಜಾಗರೂಕತೆ ಭಯಾನಕ ಅಗ್ನಿದಿವ್ಯಗಳನ್ನೇ ತಂದೊಡ್ಡಬಹುದು ! ಸ್ವಲ್ಪ ಸೂಕ್ಷ್ಮವಾಗಿ ಇಂದಿನ ಸ್ಥಿತಿಯನ್ನು ಅವಲೋಕಿಸಿ ವಿಚಾರ ಮಾಡಿದರೆ ಇದು ನಮ್ಮರಿವಿಗೆ ಬರುತ್ತದೆ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕಷ್ಟೆ. ಇದೇ ಜಾಗೃತ ಮಂತ್ರ ! ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021