ಜಗದೊಡೆಯ ರಾಮ ತಾ
ನಿರ್ದೊಡೇನಾಯ್ತು ಪೇಳ್
ಲಕ್ಷ್ಮಣನು ರೇಖೆಯನು
ಎಳೆದೊಡೇನಾಯ್ತು ?
ಜಗದಂಬೆಯಾದೊಡೇನ್ ?
ಜಗದೊಡೆಯನಾದೊಡೇನ್ ?
ತಡೆಯಲಳವೇ ವಿಧಿಯ
ಜಾಣಮೂರ್ಖ //
ವಿಧಿಯನ್ನು ಬದಲಾಯಿಸಲು ವಿಧಾತನಿಂದಲೂ ಸಾಧ್ಯವಿಲ್ಲ. ಅಮಿತ ಪರಾಕ್ರಮಶಾಲಿಯಾದ ಶ್ರೀರಾಮನೇ ಸೀತಾಮಾತೆಯ ಜೊತೆಯಲ್ಲಿದ್ದರೂ ಸಹ , ಮಹಾ ಪರಾಕ್ರಮಿಯೂ ಆದಿಶೇಷನ ಅವತಾರವೂ ಆದ ಲಕ್ಷ್ಮಣನೇ ಲಕ್ಷ್ಮಣ ರೇಖೆಯನ್ನು ಎಳೆದರೂ ಸಹ ಸೀತಾಪಹರಣವನ್ನು ತಪ್ಪಿಸಲಾಯಿತೇನು ? ಇನ್ನು ಸೀತಾಮಾತೆ ! ಮಹಾ ಪತಿವ್ರತೆ , ಮಹಾ ಸಾಧ್ವಿ ! ಸಾಕ್ಷಾತ್ ಲಕ್ಷ್ಮೀದೇವಿಯ ಅವತಾರವೇ ಆದರೂ ಸಹ ವಿಧಿಗೆ ಮಣಿಯಲೇ ಬೇಕಾಯ್ತು . ಹೀಗೆ ಪುರಾಣದ ಯಾವುದೇ ಸಂದರ್ಭವನ್ನು ಅವಲೋಕಿಸಿದರೂ ವಿಧಿಯನ್ನು ಬದಲಿಸಿದವರು, ತಡೆದವರೂ ಯಾರೂ ಇಲ್ಲ. ವಿಧಿ ವಿಲಾಸವನ್ನು ಬಲ್ಲವರಾರು ?! ಆದರೆ ನಮ್ಮ ಬದುಕಿನ ರೀತಿ ನೀತಿಗಳಿಂದ , ನ್ಯಾಯಪರತೆಯಿಂದ , ಸತ್ಯಸಂಧತೆಯಿಂದ ಸದ್ಗತಿಯನ್ನು ಹೊಂದಬಹುದೆಂಬ ಖಚಿತಾಂಶವನ್ನು ಮಾತ್ರ ಅಲ್ಲಗೆಳೆಯಲಾಗದು. ನಮ್ಮ ಬದುಕು ವಿಧಿಯ ಮನಸ್ಸನ್ನೂ ಗೆಲ್ಲುವಷ್ಟು ಆದರ್ಶಪ್ರಾಯವೂ, ಸತ್ಯ- ಧರ್ಮಪರವೂ ಆಗಿರಬೇಕು. ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021