ಹಿಡಿಯಲೆಳೆಸುವೆಯೇಕೆ
ಚಿಟ್ಟೆಯನು ಬೆನ್ನಟ್ಟಿ !
ಹಿಡಿಯಲಳವೇನದನು
ಪೇಳೆಲವೊ ಕೆಳೆಯ !?
ಸುಮ್ಮಗಿರಲದೆವಂದು
ಬೆನ್ನೇರಿ ನಲಿವುದೈ
ಇದೆ ಸೃಷ್ಟಿ ಸತ್ಯ ಕಾಣ್
ಜಾಣಮೂರ್ಖ //
ಬಣ್ಣದ ಚಿಟ್ಟೆ ! ಅತ್ಯಂತ ಸುಂದರ ! ಮನಮೋಹಕ! ಆದನ್ನು ನೋಡಿ ಮನದಲ್ಲಿ ಸಂತೋಷ ಪಡಬೇಕು. ಆದರೆ ನಾವು ಅದನ್ನು ಹಿಡಿಯಲು ಹೋಗುತ್ತೇವೆ. ಆದರೆ ಅದು ಕೈಗೆ ಸಿಗುತ್ತದೆಯೇನು ? ಆದರೂ ನಾವು ವ್ಯರ್ಥ ಪ್ರಯತ್ನವನ್ನು ಮಾತ್ರ ಕೈಬಿಡುವುದಿಲ್ಲ. ಹೀಗೇಕೆ ನಮ್ಮ ವರ್ತನೆ !? ಈ ಬೆನ್ನಟ್ಟುವುದನ್ನು ಬಿಟ್ಟು ಸುಮ್ಮನೆ ಒಂದು ಕಡೆ ಶಾಂತವಾಗಿ ಕುಳಿತುಕೊಳ್ಳಿ. ಆ ಚಿಟ್ಟೆಯೇ ನಿಮ್ಮ ಬೆನ್ನ ಮೇಲೆ ಬಂದು ಕುಳಿತುಕೊಳ್ಳುತ್ತದೆ. ಹೀಗೆಯೇ ಕೈಗೆಟುಕದುದಕ್ಕೆ ಸುಮ್ಮನೇ ವ್ಯರ್ಥ ಪ್ರಯತ್ನ ಮಾಡದೇ ಶಾಂತವಾಗಿರಿ. ಒಂದು ದಿನ ಭಗವಂತ ಅದನ್ನು ನಿಮಗೆ ಕರುಣಿಸುತ್ತಾನೆ. ಮನಸ್ಸು ಶಾಂತವಾಗಿ ಆನಂದವು ನೆಲೆಗೊಳ್ಳುತ್ತದೆ. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021