ಲಕ್ಷಕೊಟ್ಟೇನು ಫಲ
ಲಕ್ಷ್ಯ ನೀಡದ ಮೇಲೆ !
ಜಂಭ ಡಂಭದ ಲಕ್ಷ
ಒಪ್ಪುವನೆ ದೇವ!
ಅರ್ತಿಯಿಂ ಮರಳೆರೆದ
ಅಳಿಲ ಜೀವವೆ ಧನ್ಯ
ರಾಮನೊಲವಿಗೆ ಹೇತು
ಜಾಣಮೂರ್ಖ //
ಭಗವಂತನಿಗೆ ಬೇಕಾಗಿರೋದು ನಾವು ಕೊಡುವ ಹಣವಲ್ಲ. ಅದನ್ನು ನಿನಗೆ ಕೊಟ್ಟವನು ಯಾರು ? ಯೋಚಿಸಯ್ಯ ಗೆಳೆಯ ! ಹಾಗಾದರೆ ದೇವನಿಗೆ ಏನು ಬೇಕು ? ಅವನೇನು ಬಯಸುತ್ತಾನೆ ನಮ್ಮಿಂದ ? ಎಂದರೆ ನಿರ್ಮಲವಾದ ಭಕ್ತಿ ಪ್ರೇಮವನ್ನಷ್ಟೆ. ಲಕ್ಷ ನಮಗಷ್ಟೆ. ಅವನಿಗೆ ಬೇಕಿರೋದು ನಮ್ಮ ಲಕ್ಷ್ಯ ಮಾತ್ರ. ಕಡಲಿಗೆ ಸೇತುವೆಯನ್ನು ಕಟ್ಟುವಾಗ ಭಕ್ತಿ ಪ್ರೀತಿಗಳಿಂದ ಮರಳೆರೆದ ಅಳಿಲಿನ ನಿಷ್ಕಲ್ಮಶ, ನಿರ್ಮಲ ಭಕ್ತಿಪೂರ್ವಕ ಸೇವೆ ಶ್ರೀರಾಮನ ಪ್ರೇಮಕ್ಕೆ ಪಾತ್ರವಾಗಲು ಕಾರಣವಾಗಲಿಲ್ಲವೇ !? ಹಾಗೆ ನಿಷ್ಕಲ್ಮಶವಾದ, ನಿರಪೇಕ್ಷಣೀಯವಾದ ಸೇವೆ , ಭಕ್ತಿ, ದೈವೀಪ್ರೇಮ ಇತ್ಯಾದಿ ಮೌಲ್ಯಗಳು ನಮ್ಮನ್ನು ಎತ್ತರಕ್ಕೆ ಕರೆದೊಯ್ದುಬಿಡುತ್ತವೆ. ಓ, ಗೆಳೆಯ ಇಲ್ಲಿಯ ವರೆಗಿನ ಬದುಕನ್ನು ಬಿಡು. ಇನ್ನಾದರೂ ಚಂದವಾಗಿ ಬದುಕಿ ಬದುಕನ್ನು ಜೀವ ದೇವರ ಸುಂದರ ಸಮ್ಮಿಲನವಾಗಿಸೋಣವೇ ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021