ಶಾಂತಿಯೊಂದನು ಬಿಟ್ಟು
ಗಳಿಪುದೆಲ್ಲವ ಹಣವು
ಶಾಂತಿಯಿರುವಲ್ಲಿ ಹಣ
ಕೆಲ್ಲಿಯದು ಠಾವು !
ಬರಿದಿರಲಿ ಬೊಕ್ಕಸವು
ಮಘಮಘಿಸಲೈ ಮನವು
ಮನದ ದಾರಿದ್ರ್ಯ ತೊರೆ
ಜಾಣಮೂರ್ಖ//
ಹಣ ಜೀವನಕ್ಕೆ ಅಗತ್ಯವಾಗಿ ಬೇಕು. ಆದರೆ ಅದೇ ಪರಮ ಗುರಿಯಲ್ಲ. ಶಾಂತಿಯೊಂದನ್ನು ಬಿಟ್ಟು ಹಣವು ಉಳಿದೆಲ್ಲವನ್ನೂ ಗಳಿಸುತ್ತದೆ. ಎಲ್ಲಿ ಶಾಂತಿಯಿರುತ್ತದೆಯೋ ಅಲ್ಲಿ ಹಣಕ್ಕೆ ಜಾಗವಿಲ್ಲ. ಅದು ಇರುವುದೂ ಇಲ್ಲ. ನಮ್ಮ ಬೊಕ್ಕಸವು ಬರಿದಾದರಾಗಲಿ ಮನಸ್ಸು ಮಾತ್ರ ಹೂವಿನಂತೆ ಮಘಮಘಿಸುತ್ತಿರಬೇಕು. ಮನಸ್ಸಿನ ದಾರಿದ್ರ್ಯವನ್ನು ತೊರೆದು ಆತ್ಮಶ್ರೀ ಬೆಳಗಬೇಕು. ಶಾಂತಿ ನೆಮ್ಮದಿಗಳಿರುವ ಬದುಕೇ ನಿಜವಾದ ಬದುಕು. ಜಗತ್ತಿನ ಹಣವಂತರುಗಳ ಬದುಕನ್ನು ನೋಡಿ. ಅವರಿಗೆ ಆಸ್ತಿ, ಅಂತಸ್ತು, ಒಡವೆ, ವಸ್ತು ಎಲ್ಲಾ ಇರುತ್ತದೆ. ಏನುಬೇಕಾದರೂ ಖರೀದಿಸಿಬಿಡುತ್ತಾರೆ. ಆದರೆ ನೆಮ್ಮದಿಯನ್ನು ! ಶಾಂತಿಯನ್ನು ಖರೀದಿಸಲಾದೀತೆ ! ಹಣಕ್ಕಾಗಿ ಸದಾ ಹಪಹಪಿಸುವ ನಮ್ಮ ಮನಸ್ಸು , ಬದುಕು ಅದೆಷ್ಟು ಬಡತನದಿಂದ ಬಳಲುತ್ತಿದೆ ! ಸ್ವಲ್ಪ ಯೋಚಿಸಿ ಗೆಳೆಯರೇ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021