ಜನ್ಮಜನ್ಮಾಂತರದ
ಪ್ರಾರಬ್ಧ ಕಳೆಯಲ್ಕೆ
ದೈವಕೊಟ್ಟೀ ಭವಕೆ
ಆಧಾರ ಗುರುವು
ಮರ್ತ್ಯದೊಳ್ಮಿತ್ತುವಿನ
ಭಯಗಳೆದು ಪೊರೆವ ಗುರು
ಅರಿವ ಸೊಡರಿಂಗೆರಗೊ
ಜಾಣಮೂರ್ಖ //
ನಾವು ನಮ್ಮ ಪ್ರಾರಬ್ಧಕರ್ಮಾನುಸಾರವಾಗಿ ಅನೇಕ ಜನ್ಮಗಳನ್ನು ಕಳೆದು ಸುಕೃತ ಫಲದಿಂದ ಈ ಮಾನವ ಜನ್ಮವನ್ನು ಪಡೆದಿದ್ದೇವೆ. ಈ ಜನ್ಮವು ಭಗವಂತನಿಂದ ನೀಡಲ್ಪಟ್ಟ ಅಮೂಲ್ಯವಾದ ಉಡುಗೊರೆಯಾಗಿದೆ. ಈ ಭವ ಬಂಧನದಿಂದ ಬಿಡುಗಡೆಯ ನೀಡಲು ಭಗವಂತ ಕಳಿಸಿರುವ ಏಕೈಕ ಅಧಿಕೃತ ದೇವದೂತನೆಂದರೆ ಗುರು ! ಅದಕ್ಕೇ ಹರಮುನಿಯಲ್ ಗುರುಕಾಯ್ವನೆಂಬ ಮಾತು ಅದೆಷ್ಟು ಅರ್ಥಪೂರ್ಣ ! ಮರ್ತ್ಯಲೊಕದಲ್ಲಿ ಮೃತ್ಯುವಿನ ಭಯ ಕಳೆದು ಉದ್ಧರಿಸುವ ಪರಮ ಗುರುವು ಅರಿವಿನ ಸೊಡರು ! ಅಂತಹಾ ಗುರುವಿನ ಚರಣಾರವಿಂದಗಳಿಗೆ ನಮಸ್ಕರಿಸಿ ನಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಳ್ಳೋಣ. ಅಲ್ಲವೇ ಗೆಳೆಯರೇ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021