ಸಂಬಂಧಗಳ ಬೆಸೆಯುವಿಕೆಯಲ್ಲಿ ನಾನೂ
ಎಡೆವಿದೆನೇನೋ..!!! ನಾವು ನೋಡುವ ಹಾಗೆ ಜಗತ್ತಿಲ್ಲ
ನಾವು ಮುಗ್ಧತೆಯಿಂದ ನೋಡಿದರೆ ಅಪಹಾಸ್ಯ ಮಾಡಿ ತುಂಬಿದ ಕೊಳದಲ್ಲಿ ತಲೆ ಇಟ್ಟಿಸಿ
ವಿಶ್ವರೂಪ ತೋರಿಸುತ್ತಾರೆ!!
ನಮಗೆಲ್ಲಾ ಗೊತ್ತು ಎಂದು ಸೆಟೆದು ನಿಂತರೆ ಎದುರಿಗೆ ಬಂದು
ನಾಟಕೀಯ ನಗು ಬೀರುತ್ತಾರೆ
ಇಗೊ ಹೀಗೆ ಚೆನ್ನಾಗಿ ಆತ್ಮೀಯತೆಯಿಂದ ಮಾತಾನಾಡಿಸಿದರೆಂದು ಹತ್ತಿರ ಕರೆಸಿಕೊಂಡರೆ ಹೆಗಲ ಮೇಲೆ ಕೈ ಹಾಕಿ ಫೋಟೋಗೆ ನಿಲ್ಲುತ್ತಾರೆ!
ಮುಗ್ಧತೆಯನ್ನು ಒಮ್ಮೆಲೆ ಪ್ರೀತಿಸಿ ಹೊರಟರೆ ಭಾವಗಳಲ್ಲಿ ಮಿಂದು ಕಳೆದುಹೋಗುವ ಸಾಧ್ಯತೆ.. ಹಾಗೆಯೇ ಅವನನ್ನು ದೂರವಿಟ್ಟಿದ್ದೆ ..
ಮೊನ್ನೆ ಮಳೆಯಲ್ಲಿ ಮಿಂದು ಸೆಕ್ಯೂರಿಟಿಯ ಜೊತೆ ನಿಂತು ತಿಂಗಳಿನಿಂದ ಕಾದಿದ್ದು ತಿಳಿದಿರಲಿಲ್ಲ.. ತಿಳಿದರೂ ಅಸಡ್ಡೆಯಿಂದ ಹೊರಟೆ. ವಾಹನ ಸುಯ್ ಎಂದು ಗಾಳಿಯಲ್ಲಿ ತೇಲಿದಷ್ಟು ಮನಸ್ಸು ತಾಂತ್ರಿಕವಾಗಿ ಚಿಂತಿಸುತ್ತಿದೆ..ಅಸಲಿಗೆ ನಾನೇ ಹೀಗೆ???? ಮಾನವೀಯತೆಗೆ ಕಪ್ಪು ಬಣ್ಣ ಹಚ್ಚಿ ಎಲ್ಲಾ ರಂಗುಗಳನ್ನು ಹಣಕ್ಕಷ್ಟೆ ಹಚ್ಚಿದವಳು. ಬದುಕು ಕಲಿಸಿಕೊಟ್ಟ ಪಾಠವಲ್ಲ! ನಾನೇ ಕಲಿತ ಮತ್ತು ನನ್ನ ಮೇಲೆ ಹತೋಟಿ ಇಟ್ಟುಕೊಂಡ ನೈಜತೆ. ಅವ ಮಾರನೇ ದಿನವೂ ಈ ಕಲ್ಲು ಮನಕ್ಕೆ ತಣ್ಣೀರೆರೆಯಲು ಬಂದು ಗೇಟಿನ ಮುಂದೇನೇ ಅಪಘಾತಕ್ಕೀಡಾದ!! ನಾನೂ ಅದೇ ದಾಟಿಯಲ್ಲಿ “ಇರಬಹುದು ಅವ ನನ್ನ ಭೆಟ್ಟಿ ಮಾಡಲು ಬಂದಿರಬಹುದು”. ನಾನು ಹೇಳದೆಯೇ?? ರೋಡಿನಲ್ಲಿ ಅನಾಥ ಜೀವವಿಲ್ಲದ ದೇಹ. ಸಂಬಂಧವಿಲ್ಲದ ಸೆಕ್ಯೂರಿಟಿ ಕೊಟ್ಟಷ್ಟು ಕಾಳಜಿ ನಾನು ಕೊಡಲಿಲ್ಲ. ಕಡೆಗೆ ಸೆಕ್ಯೂರಿಟಿಗೇ ಒಂದಷ್ಟು ಹಣ ಕೊಟ್ಟಂಥ ಧನ್ಯತಾ ಭಾವವಲ್ಲ! ಕೇವಲ ಅವನ ಭಾವನೆಗಳಿಗೆ ಇನ್ನೊಬ್ಬರ ಹತ್ತಿರ ತೆತ್ತು ಬೆಲೆ!!ಇದು ನಾನು!!ನಾನೆಂಬ ಜೀವ.
- ಹೌದು ಅವನು ಅಲ್ಲಿಗೆ ಬಂದದ್ದೂ ನನಗಾಗೇ!!! - July 18, 2020