Write to us : Contact.kshana@gmail.com
ಮುಟ್ಟೇಳೊ ದೈವತ್ವ ಬಿಟ್ಟು ನೋಡೊಳಗಣ್ಣನಟ್ಟಿಬಿಡು ಮನಮೃಗವ ಕಟ್ಟಿಬಿಡು ಕನವರಿಕೆ ಸುಟ್ಟುರುಹೊ ಕೊಳೆಯ ಹುಟ್ಟು ಮಾನವ ನೀನು ಕೆಟ್ಟು ಪೋಗದಿರಯ್ಯೊ ಮುಟ್ಟೇಳೊ ದೈವತ್ವ ಜಾಣಮೂರ್ಖ //   ತತ್ರಾಪಿ... Read More
ನಿನ್ನರಿವೆ ಗುರು ನಿನಗೆ ನಿನ್ನ ಮರೆವೆಯೆ ನಿನಗೆ ದುಃಖದೊಳ್ದೂಡುತಿದೆ ನಿನ್ನಿಂದಲೇ ನಿನಗೆ ಸಂಕಟವದರಿಯೊ ನಿನ್ನ ಮರೆವೆಯ ತೆರೆಯ ನೀನೆ ಸರಿಸಲು ಬೇಕು ನಿನ್ನರಿವೆ ಗುರು ನಿನಗೆ ಜಾಣಮೂರ್ಖ//... Read More
ಸಲ್ಲದಾಟವ ತೊರೆಯೊ ಕಲ್ಲ ಮೆಲ್ಲುವೆಯೇಕೆ ಕಲ್ಲು ಸಕ್ಕರೆಯಿಹುದು ಮೆಲ್ಲು ಬಾರೆನ್ನುತಲಿ ಗುರುವು ತಾ ಕರೆಯೆ ಇಲ್ಲ ಕಲ್ಲನೆ ಮೆಲ್ವೆನೆನುವ ಮೂರ್ಖನ ಪರಿಯ ಸಲ್ಲದಾಟವ ತೊರೆಯೊ ಜಾಣಮೂರ್ಖ// ಕಲ್ಲನ್ನೇಕೆ... Read More
ವಿಸ್ಮಯ ಪ್ರಪಂಚ ಮನೆಗು ಮುನ್ನವು ಬಯಲು ಮನೆಬೀಳೆ ಬಯಲಂತೆ ತನುವೆಂಬ ಮನೆಹುಟ್ಟಿ ಬೀಳೆ ಬರಿ ಬಯಲು ಘನಮನೆಯು ಬಯಲಪ್ಪುದಚ್ಚರಿಯ ಕಾಣೇಳು ಕೊನೆಗೆಲ್ಲವೂ ಬಯಲೊ ಜಾಣಮೂರ್ಖ// ನಾನು ಅರಮನೆಯ... Read More
ಮಸ್ತಕದೊಳಿಡು ಅರಿವ ಬೆಸ್ತು ಬೀಳುತ ಮೀನು ಹಾವು ಕಪ್ಪೆಗಳೆಲ್ಲ ಬೆಸ್ತನಾ ಬಲೆಗೈದು ಬಿದ್ದರೇನಂತೆ ! ಬೆಸ್ತನೊಳ್ಳೆಯ ಮೀನನೊಯ್ವವೊಲು ಸುಜ್ಞಾನ ಮಸ್ತಕದೊಳಿಡು ಅರಿವ ಜಾಣಮೂರ್ಖ//   ಈ ಮುಕ್ತಕದಲ್ಲಿ... Read More
ಗುಳ್ಳೆನರಿಯಾಟ ಬಿಡೊ ಎಳ್ಳಿನೊಳಗೆಣ್ಣೆಯೊಲು ಕಲ್ಲಿನೊಳ ಬೆಂಕಿಯೊಲು ಸುಳ್ಳಿನೊಳಗಡಗಿರುವ ಸತ್ಯದೊಲು ದೈವ ಉಳ್ಳೆವೈ ದೇಹದೊಳೆ ದೈವದಾವಾಸವರಿ ಗುಳ್ಳೆನರಿಯಾಟ ಬಿಡೊ ಜಾಣಮೂರ್ಖ// ಎಳ್ಳಿನಲ್ಲಿ ಎಣ್ಣೆಯಿರುವಂತೆ , ಕಲ್ಲಿನಲ್ಲಿ ಬೆಂಕಿ ಇರುವಂತೆ... Read More
ಘನವಳಿದು ಘನನಾಗೊ ತನು ಕರಗದಾ ಮೇಲೆ ಜಪತಪದಿ ಫಲವೇನು? ಮನವು ಅರಳದೆ ಬರಿದೆ ಮಡಿ ಮಾಡಲೇನು? ಧನಮಿರ್ದೊಡೇನು ಸತ್ಪಾತ್ರಕ್ಕೆ ಸಲ್ಲದಿರೆ ಘನವಳಿದು ಘನನಾಗೊ ಜಾಣಮೂರ್ಖ// ಜೀವಶಿವಸೇವೆಯಲ್ಲಿ ,... Read More
ನಶೆ ಸೆರೆಗುಡುಕಗಿಹುದು ನಶೆ ಕುಡಿಯದವಗೂ ನಶೆಯೆ? ಇರಲಿ ಭಕ್ತಿಯ ನಶೆಯು ನಶೆಯ ನಾಟಕವೆ? ಸಿರಿಯ ನಶೆಯಹಮ ನಶೆ ಧರೆ ತನ್ನದೆಂಬ ನಶೆ ಪೊರೆದವನ ಮರೆಯದಿರೊ ಜಾಣಮೂರ್ಖ// ಸಾಮಾನ್ಯವಾಗಿ... Read More
ಜೀವ ದೀವಿಗೆ ನೋವಿನಾ ಸೊಡರಿಂಗೆ ನೋವ ತೈಲವನೆರೆದು ನೋವ ಬೆಳಕಲಿ ಬಾಳ್ಗೆ ನಲಿವಿನಾ ಗುರಿಯೊ ! ಜೀವನದ ಪಯಣದೊಳಗಿದೆ ಬಾಳಿನುದ್ದಕ್ಕು ಜೀವ ದೀವಿಗೆ ಬತ್ತಿ ಜಾಣಮೂರ್ಖ// ಈ... Read More
ಒಳವ್ಯಾಪಾರ ಹೊರಗಿನೀ ವ್ಯಾಪಾರ ಮೋಹವನು ಕಳಚೊಮ್ಮೆ ಸಿರಿಯಾಡುತಲಿ ಕಾಣು ಒಳಗಿನಾ ಬಯಲ ಗುರಿಯಿರದೆ ಹರಿದು ನದಿ ಸಾಗರವ ಸೇರ್ವಂತೆ ಹರಿ ಮೋಕ್ಷ ಕಡಲೆಡೆಗೆ ಜಾಣಮೂರ್ಖ // ಹೊರಬದುಕಿನ... Read More

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber